ನಟ ಹಾಗೂ ಹಿಂದಿ ‘ಬಿಗ್ ಬಾಸ್’ ಮಾಜಿ ಸ್ಪರ್ಧಿ ಪ್ರಿಯಾಂಕ್ ಶರ್ಮಾ ಅವರ ಮೇಲೆ ತಂದೆ-ತಾಯಿ ಎದುರೇ ಪ್ರಿಯಾಂಕ್ ವ್ಯಕ್ತಿಯೋರ್ವ ಹಲ್ಲೆ ನಡೆಸಿದ್ದಾನೆ.
‘ಬಿಗ್ ಬಾಸ್’ ಮಾಜಿ ಸ್ಪರ್ಧಿ ಪ್ರಿಯಾಂಕ್ ಶರ್ಮಾ ಅವರನ್ನು ವ್ಯಕ್ತಿಯೋರ್ವ ಥಳಿಸಿದ್ದಾನೆ. ನಂತರ ಅವರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಯಾವುದೇ ರೀತಿಯ ಪ್ರಾಣ ಹಾನಿ ಆಗಿಲ್ಲ ಅನ್ನೋದು ಸಮಾಧಾನಕರ ವಿಚಾರ. ಜುಲೈ 30ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪ್ರಿಯಾಂಕ್ ಶರ್ಮಾ ಅವರು ತಾಯಿ ಜತೆ ಘಜಿಯಾಬಾದ್ ಆಸ್ಪತ್ರೆಗೆ ತೆರಳಿದ್ದರು. ಅವರ ತಾಯಿಗೆ ಚೆಕಪ್ ಮಾಡಿಸುವುದಿತ್ತು. ಪ್ರಿಯಾಂಕ್ ಅವರ ತಂದೆ ಕೂಡ ಇವರ ಜತೆ ಆಗಮಿಸಿದ್ದರು. ಚಿಕಿತ್ಸೆ ಕೊಡಿಸಿ ಆಸ್ಪತ್ರೆಯಿಂದ ಹೊರ ಬರುವಾಗ ವ್ಯಕ್ತಿಯೋರ್ವ ಬಂದು ಏಕಾಏಕಿ ಪ್ರಿಯಾಂಕ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಅದೃಷ್ಟವಶಾತ್ ಪ್ರಿಯಾಂಕ್ ಅವರಿಗೆ ಯಾವುದೇ ತೊಂದರೆ ಆಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಿಯಾಂಕ್ ಕೌಶಂಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.