ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿ: ವೆಲ್ಫೇರ್ ಪಾರ್ಟಿಯಿಂದ ಸಾಮೂಹಿಕ ಸಹಿ ಸಂಗ್ರಹ ಅಭಿಯಾನ

ಸಾಮೂಹಿಕ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ವೆಲ್ವೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹಿರ್ ಹುಸೇನ್ ತಿಳಿಸಿದ್ದಾರೆ.

News Desk
4 Min Read

ಬೆಂಗಳೂರು: ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ವೆಲ್ವೇರ್ ಪಾರ್ಟಿ ಆಫ್ ಇಂಡಿಯಾವು ಆಗಸ್ಟ್ 19ರಿಂದ 21ರವರೆಗೆ ಮೂರು ದಿನಗಳ ಕಾಲ ರಾಷ್ಟ್ರವ್ಯಾಪಿಯಾಗಿ ಸಾಮೂಹಿಕ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ವೆಲ್ವೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹಿರ್ ಹುಸೇನ್ ತಿಳಿಸಿದ್ದಾರೆ.

ಗುರುವಾರ ಬೆಂಗಳೂರಿನ ಶಿವಾಜಿನಗರದಲ್ಲಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ 6.10 ಲಕ್ಷ ಕೈದಿಗಳಲ್ಲಿ ಸುಮಾರು 80 ಪ್ರತಿಶತದಷ್ಟು ಜನರು ವಿಚಾರಣೆಯಲ್ಲಿದ್ದಾರೆ ಎಂದು ಅಪರಾಧ ನ್ಯಾಯ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸುವ ಅಗತ್ಯವನ್ನು ವಿವರಿಸುತ್ತಾ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಕೆಲವು ದಿನಗಳ ಹಿಂದೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.‌ ಇದು ಅತ್ಯಂತ ಗಂಭೀರ ವಿಚಾರ ಎಂದು ತಿಳಿಸಿದರು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾವು 19-21 ಆಗಸ್ಟ್ 2022 ರಿಂದ “ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿ-ಸಾಮೂಹಿಕ ಸಹಿ ಅಭಿಯಾನ” ಎಂಬ ವಿಷಯದೊಂದಿಗೆ ಮೂರು ದಿನಗಳ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಸಾರ್ವಜನಿಕರಿಂದ ಸಾಮೂಹಿಕ ಸಹಿಗಳನ್ನು ಸಂಗ್ರಹಿಸಲಾಗುವುದು. ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲು ತಕ್ಷಣದ ಮಧ್ಯಸ್ಥಿಕೆಗೆ ಒತ್ತಾಯಿಸಿ ಸಹಿಗಳ ಜೊತೆಗೆ ಎಲ್ಲ ಜಿಲ್ಲೆಗಳಿಂದ ಭಾರತದ ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರವನ್ನು ಕಳುಹಿಸಲಾಗುವುದು. ಪತ್ರಿಕಾಗೋಷ್ಠಿಗಳು, ವಿಚಾರ ಸಂಕಿರಣಗಳು, ಮಾನವ ಹಕ್ಕುಗಳ ಇಲಾಖೆಗೆ ಜ್ಞಾಪಕ ಪತ್ರಗಳು ಈ ಅಭಿಯಾನದ ಇತರ ಕಾರ್ಯಕ್ರಮಗಳಾಗಿವೆ. ರಾಜಕೀಯ ಕೈದಿಗಳ ಬಿಡುಗಡೆಯೇ ಅಭಿಯಾನದ ಪ್ರಮುಖ ಗುರಿಯಾಗಿದೆ ಎಂದು ತಾಹಿರ್ ಹುಸೇನ್ ತಿಳಿಸಿದ್ದಾರೆ.

ರಾಷ್ಟ್ರಾದ್ಯಂತ ಜೈಲುಗಳಲ್ಲಿ ಲಕ್ಷಗಟ್ಟಲೆ ಅಂಡರ್ ಟ್ರೇಲ್ಸ್ ಕೈದಿಗಳಿದ್ದಾರೆ, ಅವರಲ್ಲಿ ಸಾವಿರಾರು ಕೈದಿಗಳು ರಾಜಕೀಯ ಕೈದಿಗಳಾಗಿದ್ದಾರೆ. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತುವವರನ್ನು ಯುಎಪಿಎ, ಎನ್‌ಎಸ್‌ಎ, ದೇಶದ್ರೋಹದಂತಹ ಕಠೋರ ಕಾನೂನುಗಳ ಅಡಿಯಲ್ಲಿ ಕೇಸುಗಳು ದಾಖಲಿಸಿ ಜೈಲಿನಲ್ಲಿ ಇರಿಸಲಾಗುತ್ತದೆ ಮತ್ತು ವರ್ಷಗಟ್ಟಲೆ ಅವರು ಜೈಲಿನಲ್ಲಿಯೇ ಇದ್ದಾರೆ. ಅವರ ಜಾಮೀನು ಅರ್ಜಿಗಳನ್ನು ಮತ್ತೆ ಮತ್ತೆ ತಿರಸ್ಕರಿಸಲಾಗುತ್ತದೆ. ಉಮರ್ ಖಾಲಿದ್, ಸಿದ್ದಿಕ್ ಕಪ್ಪನ್, ತೀಸ್ತಾ ಸ್ಟ್ಲೀವಾಡ್, ಸಂಜೀವ್ ಭಟ್, ಜಾವೀದ್ ಮೊಹಮ್ಮದ್, ಖಾಲಿದ್ ಸೈಫಿ, ವರವರ ರಾವ್ ಮತ್ತು ಪಟ್ಟಿ ಹೀಗೆ ಮುಂದುವರಿಯುತ್ತದೆ ಎಂದು ಹೇಳಿದರು.

- Advertisement -

31ನೇ ಡಿಸೆಂಬರ್ 2020 ರಂತೆ ಭಾರತೀಯ ಜೈಲುಗಳಲ್ಲಿರುವ ಒಟ್ಟು ಕೈದಿಗಳ ಸಂಖ್ಯೆ 488,511. ಅದರಲ್ಲಿ ವಿಚಾರಣಾಧೀನ (ಅಂಡರ್ ಟ್ರೇಲ್ಸ್) 76% (371,848) ಆಗಿದೆ. ಅರ್ಧದಷ್ಟು ಅಂಡರ್ ಟ್ರೇಲ್‌ಗಳು ಜಿಲ್ಲಾ ಕಾರಾಗೃಹಗಳಲ್ಲಿದ್ದಾರೆ, ಕಾರಾಗೃಹಗಳು ಕಿಕ್ಕಿರಿದು ತುಂಬಿವೆ (136%). ಅಂಚಿನಲ್ಲಿರುವ ಸಮುದಾಯಗಳ ಮೇಲೆ ಇದರ ಪರಿಣಾಮ ಹೆಚ್ಚಿದೆ. ವಿಚಾರಣೆ ಅಡಿಯಲ್ಲಿರುವ ಮೂವರಲ್ಲಿ ಇಬ್ಬರು SC, ST ಅಥವಾ OBC ಗೆ ಸೇರಿದವರು. ಅವರು ಅಕ್ರಮ ಬಂಧನಗಳು, ತಪ್ಪು ತಪ್ಪೊಪ್ಪಿಗೆ ಹೇಳಿಕೆಗಳು ಮತ್ತು ಬಂಧನಗಳಿಗೆ ಗುರಿಯಾಗುತ್ತಾರೆ ಮತ್ತು ಅವರಿಗೆ ಜಾಮೀನು ಪಡೆಯಲು ಯಾವುದೇ ಮಾರ್ಗವಿಲ್ಲ. ಪರಿಶಿಷ್ಟ ಜಾತಿಯ ಕೈದಿಗಳು 20.7% ರಷ್ಟಿದ್ದು ಅವರ ಜನಸಂಖ್ಯೆಯ 16.1% ರಷ್ಟಿದೆ. ಪರಿಶಿಷ್ಟ ಪಂಗಡಗಳು 11.2% ಇದ್ದು ಅವರ ಜನಸಂಖ್ಯೆಗೆ ವಿರುದ್ಧವಾಗಿ 8.2% ಜೈಲುಗಳಲ್ಲಿದ್ದಾರೆ. ಜಾತಿ ಪೂರ್ವಾಗ್ರಹ ಮತ್ತು ಕೆಲವು ಸಮುದಾಯಗಳ ಅತಿಯಾದ ಪೋಲೀಸಿಂಗ್ ನಿಂದಾಗಿ ಜೈಲುಗಳಲ್ಲಿ ಅಂಚಿನಲ್ಲಿರುವ ಜಾತಿ ಗುಂಪುಗಳ ಗಮನಾರ್ಹ ವಿಷಯ ಎಂದು ಹೇಳಿದರು.

ಜೈಲಿನಲ್ಲಿರುವ ಮುಸ್ಲಿಮರು ಅವರ ಜನಸಂಖ್ಯೆಗೆ ಅಸಮಾನರಾಗಿದ್ದಾರೆ. 19.1% (488,511 ರಲ್ಲಿ 93,774) ಮುಸ್ಲಿಮರು ಜೈಲುಗಳಲ್ಲಿದ್ದಾರೆ, ಅವರ ಜನಸಂಖ್ಯೆಯ ಪಾಲು 14.2%. ವಿಚಾರಣೆ ಅಡಿಯಲ್ಲಿರುವವರ ಪೈಕಿ 19.5% ರಷ್ಟು ಮುಸ್ಲಿಮರು. 30% ಕ್ಕಿಂತ ಹೆಚ್ಚು ಬಂಧಿತರು ಮತ್ತು 57.2% ಖೈದಿಗಳು ಮುಸ್ಲಿಮರು .ಅಸ್ಸಾಂನಲ್ಲಿ ಅತಿ ಹೆಚ್ಚು ಶೇಕಡಾವಾರು ಮುಸ್ಲಿಂ ವಿಚಾರಣಾಧೀನರು (52.3%) ಮತ್ತು ಅಪರಾಧಿಗಳಿದ್ದಾರೆ(47%). ನಂತರ ಪಶ್ಚಿಮ ಬಂಗಾಳ 43.5% ಮುಸ್ಲಿಂ ವಿಚಾರಣಾಧೀನರು ಮತ್ತು 33% ಮುಸ್ಲಿಂ ಅಪರಾಧಿಗಳನ್ನು ಹೊಂದಿದೆ ಎಂದು ಅಡ್ವೋಕೇಟ್ ತಾಹಿರ್ ಹುಸೇನ್ ಮಾಹಿತಿ ನೀಡಿದರು.

2019 ಕ್ಕೆ ಹೋಲಿಸಿದರೆ 2020 ರಲ್ಲಿ ಅಂಡರ್ ಟ್ರೇಲ್‌ಗಳ ಬಿಡುಗಡೆಯು 19.6% ರಷ್ಟು ಕಡಿಮೆಯಾಗಿದೆ. CrPC ಯ ಸೆಕ್ಷನ್ 436A ರ ಪ್ರಕಾರ ಒರ್ವ ವ್ಯಕ್ತಿಯ ವಿರುದ್ಧ ಆರೋಪಿಸಲಾದ ಅಪರಾಧಕ್ಕಾಗಿ ವಿಧಿಸಬಹುದಾದ ಗರಿಷ್ಠ ಶಿಕ್ಷೆಯ ಅರ್ಧಕ್ಕಿಂತ ಹೆಚ್ಚು ಜೈಲು ಶಿಕ್ಷೆಯನ್ನು ಅನುಭವಿಸಿದ ಅಂಡರ್ ಟ್ರೇಲ್‌ಗಳನ್ನು ಬಿಡುಗಡೆ ಮಾಡಲು ಒದಗಿಸುತ್ತದೆ. ಆದರೆ 2020 ರಲ್ಲಿ ಕೇವಲ ಮೂರನೇ ಒಂದು ಭಾಗದಷ್ಟು (34%) ಕೈದಿಗಳು ಆರಂಭಿಕ ಬಿಡುಗಡೆಗೆ ಅರ್ಹರಾಗಿದ್ದಾರೆ. 1291 ಅರ್ಹ ಖೈದಿಗಳಲ್ಲಿ 422 ಮಂದಿ ಮಾತ್ರ ಬಿಡುಗಡೆ ಹೊಂದಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ಮಾಧ್ಯಮ ಕಾರ್ಯದರ್ಶಿ ಅಜೀಜ್ ಜಾಗೀರ್ದಾರ್, FITU ರಾಷ್ಟ್ರೀಯ ಖಜಾಂಚಿ, ವಕೀಲರಾದ ಅಬ್ದುಲ್ ಸಲಾಂ ಉಪಸ್ಥಿತರಿದ್ದರು.

ಆ. 20ರಂದು ವಿಚಾರಗೋಷ್ಠಿ
ದಿನಾಂಕ:20-08-2022 ಶನಿವಾರ ರಂದು ಬೆಂಗಳೂರಿನಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ “ರಾಜಕೀಯ ಕೈದಿಗಳ ದುಸ್ಥಿತಿ-ಮಾನವ ಹಕ್ಕು ಬಿಕ್ಕಟ್ಟು” ವಿಷಯಕ್ಕೆ ಸಂಬಂಧಿಸಿ ಬೆಳಿಗ್ಗೆ 11 ಗಂಟೆಗೆ ವಿಚಾರಗೋಷ್ಠಿ ನಡೆಯಲಿದೆ. ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ವಿ ಗೋಪಾಲ ಗೌಡ ಅವರು ಮುಖ್ಯ ಭಾಷಣ ಮಾಡಲಿದ್ದಾರೆ, ಅಂಕಣಕಾರ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀ ಶಿವಸುಂದರ್, ಉಚ್ಚ ನ್ಯಾಯಾಲಯದ ವಕೀಲರು ಮತ್ತು ಎಪಿಸಿಆರ್ ರಾಜ್ಜ್ಯಾಧ್ಯಕ್ಷರಾದ ಶ್ರೀ ಪಿ ಉಸ್ಮಾನ್ ಅವರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ವಕೀಲರಾದ ತಾಹಿರ್ ಹುಸೇನ್ ರವರು ವಹಿಸಲಿದ್ದಾರೆ.

- Advertisement -

ಈ ಅಭಿಯಾನದ ಬೇಡಿಕೆಗಳು:

• ದೇಶಾದ್ಯಂತ ಬಂಧಿತರಾಗಿರುವ ರಾಜಕೀಯ ಕೈದಿಗಳ ಮೇಲೆ ಶ್ವೇತಪತ್ರ ಹೊರತರುವುದು.

• ಯಾವುದೇ ಅಪರಾಧ ಮಾಡದೆ ಜೈಲಿನಲ್ಲಿದ್ದ ಅಮಾಯಕ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವುದು.

- Advertisement -

• ರಾಜಕೀಯ ಖೈದಿಗಳಿಗೆ ಕಾನೂನು ಸೌಲಭ್ಯಗಳು ಮತ್ತು ಜಾಮೀನು, ಪೆರೋಲ್, ತ್ವರಿತ ನ್ಯಾಯಾಲಯಗಳಲ್ಲಿ ನ್ಯಾಯೋಚಿತ ತ್ವರಿತ ಜಾಡು ಸೇರಿದಂತೆ ಮಾನವೀಯ ಚಿಕಿತ್ಸೆಗಳ ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು.

• ಜೈಲಿನಲ್ಲಿರುವ ದಿನಗಳ ಸಂಖ್ಯೆಯನ್ನು ಆಧರಿಸಿ ಕಂಬಿಗಳ ಹಿಂದೆ ಇರಿಸಲಾಗಿರುವ ಅಮಾಯಕ ರಾಜಕೀಯ ಕೈದಿಗಳಿಗೆ ಪರಿಹಾರವನ್ನು ಒದಗಿಸುವುದು.

• ನಿರಪರಾಧಿಗಳನ್ನು ತಪ್ಪಾಗಿ ಸಿಲುಕಿಸುವುದಕ್ಕಾಗಿ ತಪ್ಪಿತಸ್ಥ ತನಿಖಾ ಅಧಿಕಾರಿಗಳಿಗೆ ಶಿಕ್ಷೆ.

• UAPA, ದೇಶದ್ರೋಹ ಕಾನೂನು (124A), NSA, AFSPA, MOCOCA, GUJCOCA ಮತ್ತು ಇತರ ಕಠಿಣ ಕಾನೂನುಗಳನ್ನು ರದ್ದುಗೊಳಿಸುವುದು.

- Advertisement -
TAGGED:
Share this Article
Leave a comment
adbanner