ಬೆಂಗಳೂರು: ಬಾಲಕಿಯರ ಶೌಚಾಲಯಕ್ಕೆ ನುಗ್ಗಿ ಅಸಭ್ಯವಾಗಿ ವರ್ತಿಸಿದ್ದ ಆರೋಪಿ ಸೆರೆ

ಅಜಯ್ ಕುಮಾರ್ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ

News Desk
1 Min Read

ಬೆಂಗಳೂರು, ಜ. 23: ಬೆಂಗಳೂರಿನ  ಜಯನಗರದ ವಿಜಯ ಕಾಲೇಜಿನಲ್ಲಿ ಬಾಲಕಿಯರ ಶೌಚಾಲಯಕ್ಕೆ ನುಗ್ಗಿದ ಯುವಕನೊಬ್ಬನನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

 

- Advertisement -

ಅಜಯ್ ಕುಮಾರ್ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ. ಜ.10ರ ಬೆಳಗ್ಗೆ 8ರ ವೇಳೆ ವಿಜಯ ಕಾಲೇಜಿನಲ್ಲಿ ಬಾಲಕಿಯರ ಶೌಚಾಲಯಕ್ಕೆ ಯುವಕನೊಬ್ಬ ನುಗ್ಗಿ ವಿದ್ಯಾರ್ಥಿನಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದ. ತಕ್ಷಣ ವಿದ್ಯಾರ್ಥಿನಿ ಕಿರುಚಲು ಶುರು ಮಾಡಿದಾಗ ಗಾಬರಿಯಿಂದ ಅಲ್ಲಿಂದ ಪರಾರಿಯಾಗಿದ್ದ ಎನ್ನಲಾಗಿದೆ. 

 

- Advertisement -

ಈ ಘಟನೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಸಹ ನಡೆಸಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಹೆದರಿದ ಕಾಲೇಜಿನ ಆಡಳಿತ ಮಂಡಳಿ ಜಯನಗರ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಇದೀಗ ಆರೋಪಿ ಅಜಯ್ ಕುಮಾರ್‍ನನ್ನು ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

- Advertisement -
TAGGED:
Share this Article
Leave a comment
adbanner