ಗೃಹ ಸಚಿವರ ಮನೆಗೆ ಮುತ್ತಿಗೆ ಪ್ರಕರಣ…30 ABVP ವಿದ್ಯಾರ್ಥಿಗಳಿಗೆ ಜೆಸಿ ನಗರ ಪೊಲೀಸರಿಂದ ಸ್ಟೇಷನ್ ಬೇಲ್..!

ನಿನ್ನೆ  ವಿದ್ಯಾರ್ಥಿಗಳು ಆರಗ ಜ್ಞಾನೇಂದ್ರ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು,  ಜಯಮಹಲ್​​​ನ ಮನೆಗೆ ನುಗ್ಗಿ ಹೂಕುಂಡಗಳನ್ನೂ ಪುಡಿಮಾಡಿದ್ದರು,

News Desk
0 Min Read

ಬೆಂಗಳೂರು: ಗೃಹ ಸಚಿವರ ಮನೆಗೆ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 30 ABVP ವಿದ್ಯಾರ್ಥಿಗಳಿಗೆ ಜೆಸಿ ನಗರ ಪೊಲೀಸರಿಂದ ಸ್ಟೇಷನ್ ಬೇಲ್ ನೀಡಲಾಗಿದೆ.

ನಿನ್ನೆ  ವಿದ್ಯಾರ್ಥಿಗಳು ಆರಗ ಜ್ಞಾನೇಂದ್ರ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು,  ಜಯಮಹಲ್​​​ನ ಮನೆಗೆ ನುಗ್ಗಿ ಹೂಕುಂಡಗಳನ್ನೂ ಪುಡಿಮಾಡಿದ್ದರು, ಈ ಹಿನ್ನೆಲೆ 29 ಯುವಕರು, ಒಬ್ಬ ಯುವತಿ ಸೇರಿ 30 ಜನರನ್ನು ಬಂಧಿಸಲಾಗಿತ್ತು.
ಜೆಸಿ ನಗರ ಪೊಲೀಸರು ಷರತ್ತುಬದ್ಧ ಜಾಮೀನು ನೀಡಿದ್ದು, ಅವಶ್ಯಕತೆ ಇದ್ದರೆ ಮತ್ತೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಾಗುತ್ತದೆ ಎಂದು ಈ ಬಗ್ಗೆ ಉತ್ತರ ವಿಭಾಗ ಡಿಸಿಪಿ ವಿನಾಯಕ್ ಪಾಟೀಲ್ ಮಾಹಿತಿ ನೀಡಿದ್ದಾರೆ.

- Advertisement -
TAGGED:
Share this Article
Leave a comment
adbanner