ಸುಬ್ರಹ್ಮಣ್ಯ: ಸ್ನಾನಕ್ಕೆಂದು ಕುಮಾರಧಾರ ನದಿಗಿಳಿದ ಯುವಕ ನಾಪತ್ತೆ

ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಮಂಡ್ಯದ ಶಿವು (25) ನಾಪತ್ತೆಯಾಗಿರುವ ಯುವಕ.

News Desk
0 Min Read

ಸುಬ್ರಹ್ಮಣ್ಯ, ಆ 21: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಸ್ನಾನಕ್ಕಿಳಿದ ಮಂಡ್ಯ ಮೂಲದ ಯುವಕನೋರ್ವ ನಾಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ.

ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಮಂಡ್ಯದ ಶಿವು (25) ನಾಪತ್ತೆಯಾಗಿರುವ ಯುವಕ. ಶಿವು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಕುಕ್ಕೆಗೆ ಆಗಮಿಸಿದ್ದ. ಈ ವೇಳೆ ಸ್ನಾನಕ್ಕೆಂದು ಕುಮಾರಧಾರ ನದಿಗೆ ಹಾರಿದ್ದಾನೆ. ಆದರೆ ಸ್ವಲ್ಪ ಹೊತ್ತಿನಲ್ಲೇ ಆತ ನೀರಿನಲ್ಲಿ ನಾಪತ್ತೆಯಾಗಿದ್ದಾನೆ.ಆತನಿಗೆ ಈಜು ಬರುತ್ತಿತ್ತು ಎಂದು ಆತನೊಂದಿಗಿದ್ದ ಸ್ನೇಹಿತರು ತಿಳಿಸಿದ್ದಾರೆ.

ಸುಬ್ರಹ್ಮಣ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬಂದಿಯೂ ಆಗಮಿಸಿದ್ದು, ಯುವಕನ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.

- Advertisement -
TAGGED:
Share this Article
Leave a comment
adbanner