ಸಾಲ ಕೊಡುವ 2 ಸಾವಿರ ಆ್ಯಪ್‌ ತೆಗೆದುಹಾಕಿದ ಗೂಗಲ್

News Desk
0 Min Read

ನವದೆಹಲಿ: ಗೂಗಲ್ ಕಂಪನಿಯು ಸಾಲ ಕೊಡುವ ಎರಡು ಸಾವಿರಕ್ಕೂ ಹೆಚ್ಚು ಆ್ಯಪ್‌ಗಳನ್ನು ಭಾರತದ ಪ್ಲೇಸ್ಟೋರ್‌ನಿಂದ ಈ ವರ್ಷ ತೆಗೆದುಹಾಕಿದೆ.

ನಿಯಮ ಉಲ್ಲಂಘನೆ, ಮಾಹಿತಿಯನ್ನು ತಪ್ಪಾಗಿ ನೀಡಿದ್ದು ಹಾಗೂ ಆಫ್‌ಲೈನ್‌ ವರ್ತನೆ ಪ್ರಶ್ನಾರ್ಹವಾಗಿ ಇದ್ದಿದ್ದು ಈ ಕ್ರಮಕ್ಕೆ ಕಾರಣ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಲ ಕೊಡುವ ಆ್ಯಪ್‌ಗಳಿಂದ ಉಂಟಾದ ಸಮಸ್ಯೆಯು ಇನ್ನು ಮುಂದೆ ಕಡಿಮೆ ಆಗಬಹುದು. ಏಕೆಂದರೆ ಈ ಸಮಸ್ಯೆ ಬಗ್ಗೆ ಬಹಳ ಜನರ ಗಮನ ಹರಿದಿದೆ ಎಂದು ಗೂಗಲ್‌ ಕಂಪನಿಯ ಏಷ್ಯಾ ಪೆಸಿಫಿಕ್ ಪ್ರದೇಶದ ಹಿರಿಯ ಅಧಿಕಾರಿ ಸೈಕತ್ ಮಿತ್ರಾ ಹೇಳಿದ್ದಾರೆ.

- Advertisement -
TAGGED:
Share this Article
Leave a comment
adbanner