ಸಂಘ ಪರಿವಾರದ ಸಾಗರ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

ಈ ನಡುವೆ ಸಾಗರದ ಆಝಾದ್ ರಸ್ತೆಯಲ್ಲಿ ಅಂಗಡಿಗಳು ಎಂದಿನಂತೆ ತೆರೆದಿದ್ದು ವ್ಯಾಪಾರ ಎಂದಿನಂತೆಯೇ ನಡೆಯುತ್ತಿದೆ.

News Desk
1 Min Read

ಶಿವಮೊಗ್ಗ, ಜ.10: ಬಜರಂಗ ದಳದ ಸಾಗರ ನಗರ ಸಹ ಸಂಚಾಲಕ ಸುನೀಲ್ ಎಂಬವರ ಮೇಲೆ‌ ಹಲ್ಲೆಗೆ ಯತ್ನಿಸಿದ ಪ್ರಕರಣವನ್ನು ಖಂಡಿಸಿ ಸಂಘ ಪರಿವಾರದ ಸಂಘಟನೆಗಳು ಕರೆ ನೀಡಿರುವ ಸಾಗರ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಜರಂಗ ದಳದ ಸಾಗರ ನಗರ ಸಹ ಸಂಚಾಲಕ ಸುನೀಲ್

ಬೆಳಗಿನಿಂದಲೂ ಸಾಗರದ ಬಹುತೇಕ ಭಾಗಗಳು ಬಂದ್ ಆಗಿವೆ. ಸಂಘ ಪರಿವಾರದ  ಸಂಘಟನೆಗಳ ಕಾರ್ಯಕರ್ತರು ಬೆಳಗಿನಿಂದಲೇ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿರುವುದು ಕಂಡುಬಂದಿತು. ಸಾಗರ ನಗರದಲ್ಲಿ ತೆರೆದಿದ್ದ ಕೆಲವೊಂದು ಅಂಗಡಿಗಳನ್ನು ಕಾರ್ಯಕರ್ತರು ಮುಚ್ಚಿಸಿದರು. ಸಾಗರದ ಜತೆಗೆ ತಾಳಗುಪ್ಪದಲ್ಲೂ ಬಂದ್‌ಗೆ ಬೆಂಬಲ ಸಿಕ್ಕಿದೆ.

ಈ ನಡುವೆ ಸಾಗರದ ಆಝಾದ್ ರಸ್ತೆಯಲ್ಲಿ ಅಂಗಡಿಗಳು ಎಂದಿನಂತೆ ತೆರೆದಿದ್ದು ವ್ಯಾಪಾರ ಎಂದಿನಂತೆಯೇ ನಡೆಯುತ್ತಿದೆ. ಇಲ್ಲಿಗೆ ಸಂಘ ಪರಿವಾರದ ಕಾರ್ಯಕರ್ತರು ಬೈಕ್‌ನಲ್ಲಿ ತೆರಳಿ ಅಂಗಡಿಗಳನ್ನು ಮುಚ್ಚುವಂತೆ ಬಲವಂತಪಡಿಸಿದರು. ಆದರೆ ಅಲ್ಲಿನ  ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಲು ನಿರಾಕರಿಸಿದರು. ಇದರಿಂದ ಆಝಾದ್ ರಸ್ತೆಯಲ್ಲಿ ಕೆಲಹೊತ್ತು ಉದ್ವಿಗ್ನ  ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಈ ನಡುವೆ, ಸಾಗರದ ಬೀದಿಗಳಲ್ಲಿ ಬಂದ್ ಬೆಂಬಲಿಗರು ಪ್ರತಿಭಟನಾ ಮೆರವಣಿಗೆ ನಡೆಸಿದರು.

- Advertisement -

- Advertisement -
Share this Article
Leave a comment
adbanner