ಉಡುಪಿ: ನಾಪತ್ತೆಯಾಗಿದ್ದ ನಿಟ್ಟೂರಿನ ಕೊಡಂಕೂರು ನಿವಾಸಿ, ಆರ್ ಟಿ.ಓ ಏಜೆಂಟ್ ಅಶೋಕ್ ಸುವರ್ಣ(46) ಮೃತದೇಹ ಇಂದು ಬ್ರಹ್ಮಾವರ ನದಿಯಲ್ಲಿ ಪತ್ತೆಯಾಗಿದೆ.
ಮಾಬುಕಳ ಸೇತುವೆ ಬಳಿ ಎರಡು ದಿನಗಳ ಹಿಂದೆ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದ ಅಶೋಕ್ ಸುವರ್ಣ ಅವರ ಮೃತದೇಹ ಇವತ್ತು ನದಿಯಲ್ಲಿ ಪತ್ತೆಯಾಗಿದೆ.
ಹಿಂದಿನ ಸುದ್ದಿ
ಮಾಬುಕಳ ಸೇತುವೆಯ ಮೇಲೆ ಬೈಕ್ ಮತ್ತು ಚಪ್ಪಲ್ ಪತ್ತೆಯಾಗಿದ್ದು, ಆತ್ಮಹತ್ಯೆ ಯತ್ನ ನಡೆದಿರುವ ಸಾಧ್ಯತೆಯನ್ನು ಪ್ರಾಥಮಿಕವಾಗಿ ತೋರಿಸಿದೆ.
- Advertisement -
ಉಡುಪಿ ತಾಲೂಕಿನ ಕೊಡಂಕೂರು ಗ್ರಾಮದ ಅಶೋಕ್ ಸುವರ್ಣ (49 ವರ್ಷ) ಎಂಬುವರಿಗೆ ಈ ಬೈಕ್ ಸೇರಿದ್ದು, ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.ಅಶೋಕ್ 20 ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದ್ದು, ಕೊಡಂಕೂರಿನ ಅಶೋಕ್ ಸುವರ್ಣ ಅವರ ಮನೆಯಲ್ಲಿ ಬ್ರಹ್ಮಾವರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಡೆತ್ ನೋಟ್ ಕೂಡ ಪತ್ತೆಯಾಗಿದೆ.
ಈ ಸಂಬಂಧ ಅಶೋಕ್ ಸುವರ್ಣ ಅವರ ಕುಟುಂಬಸ್ಥರು ಉಡುಪಿ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.ನಾಪತ್ತೆಯಾದ ವ್ಯಕ್ತಿಯ ಪತ್ತೆಗಾಗಿ ಮಾಬುಕಳ ನದಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.