ಉಡುಪಿ: ಗಾಂಜಾ ಪ್ರಕರಣ – ಆರೋಪಿಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ದಂಡ

ಆರೋಪಿಯನ್ನು ಅರ್ಫನ್ (27) ಎಂದು ಗುರುತಿಸಲಾಗಿದೆ.

News Desk
1 Min Read

ಉಡುಪಿ, ಸೆ 04 : ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಮಾನ್ಯ ಪ್ರಧಾನ ಮತ್ತು ಜಿಲ್ಲಾ ವಿಶೇಷ ನ್ಯಾಯಾಲಯವು ಆರೋಪಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30,000 ದಂಡ ವಿಧಿಸಿದೆ.

ಆರೋಪಿಯನ್ನು ಅರ್ಫನ್ (27) ಎಂದು ಗುರುತಿಸಲಾಗಿದೆ.

ಆರೋಪಿ ಅರ್ಫನ್ ವಿರುದ್ದ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ 05 ಸೆಪ್ಟಂಬರ್ 2020 ರಂದು ಗಾಂಜಾ ಪ್ರಕರಣ ದಾಖಲಾಗಿದ್ದು, ಆತನಿಂದ 1 ಕೆಜಿ, 048 ಗ್ರಾಂ ತೂಕದ ಗಾಂಜಾವನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಈ ಪ್ರಕರಣದಲ್ಲಿ ಅಂದಿನ ಸೆನ್ ಅಪರಾಧ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ರವರು ಪಿರ್ಯಾದಿದಾರರಾಗಿದ್ದು, ಪಿಎಸ್‌ಐ ಶ್ರೀ ಲಕ್ಷ್ಮಣ ರವರು ಈ ಪ್ರಕರಣದಲ್ಲಿ ದೋಷಾರೋಪಣಾ ಪತ್ರವನ್ನು ತಯಾರಿಸಿರುತ್ತಾರೆ.

ಇನ್ನು 03 ಸೆಪ್ಟಂಬರ್ 022 ರಂದು ಆರೋಪಿ 1 ನೇಯವರಾದ ಅರ್ಫನ್ ರವರಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂಪಾಯಿ 30,000 ದಂಡ ವಿಧಿಸಿದ್ದು, ಪಾವತಿಸಲು ತಪ್ಪಿದಲ್ಲಿ 6 ತಿಂಗಳ ಸರಳ ಕಾರಾಗೃಹ ವಾಸ ವಿಧಿಸಿ, ಉಡುಪಿಯ ಮಾನ್ಯ ಪ್ರಧಾನ ಮತ್ತು ಜಿಲ್ಲಾ ವಿಶೇಷ ನ್ಯಾಯಾಧೀಶರಾದ ಶಾಂತವೀರ ಶಿವಪ್ಪರವರು ತೀರ್ಪು ನೀಡಿದ್ದಾರೆ.

- Advertisement -

ಪ್ರಾಸಿಕ್ಯೂಶನ್ ಪರವಾಗಿ ಶ್ರೀಮತಿ ಶಾಂತಿಬಾಯಿ ರವರು ವಾದ ಮಂಡನೆಯನ್ನು ಮಾಡಿದ್ದು, ಸದ್ರಿ ಗಾಂಜಾ ಪ್ರಕರಣದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರು ಇಲಾಖೆಯ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

- Advertisement -
Share this Article
Leave a comment
adbanner