ಕತಾರ್‌ನಲ್ಲಿ ಕೆಲಸದ ವೇಳೆ ಕುಸಿದು ಬಿದ್ದು ಉಡುಪಿ ವ್ಯಕ್ತಿ ನಿಧನ

ನಾಲ್ಕು ದಿನಗಳ ಹಿಂದೆ ಕೆಲಸದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದ ಅವರನ್ನು ಕೂಡಲೇ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

News Desk
1 Min Read

ಉಡುಪಿ: ಕತಾರ್‌ನಲ್ಲಿ ಉದ್ಯೋಗದಲ್ಲಿದ್ದ ಕೋಟತಟ್ಟು ಪಡುಕೆರೆ ನಿವಾಸಿ ಮುಹಮ್ಮದ್ (45) ಕೆಲಸದ ವೇಳೆ ಕುಸಿದು ಬಿದ್ದು ಕೆಲವು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕೆರೆ ನಿವಾಸಿಯಾದ ಮುಹಮ್ಮದ್ ಕಳೆದ 14 ವರ್ಷಗಳಿಂದ ಕತಾರ್‌ನ ಸನಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜನವರಿ 2 ರಂದು ಹುಟ್ಟೂರಿಗೆ ಭೇಟಿ ನೀಡಲು ಯೋಜಿಸಿದ್ದ ಅವರು ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ನಾಲ್ಕು ದಿನಗಳ ಹಿಂದೆ ಕೆಲಸದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದ ಅವರನ್ನು ಕೂಡಲೇ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೆದುಳು ನಿಷ್ಕ್ರಿಯಗೊಂಡ ಕಾರಣ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಕೋಟತಟ್ಟು ಪಡುಕೆರೆ ಹಿದಾಯತುಲ್ ಇಸ್ಲಾಂ ಮದ್ರಸದ ಕಾರ್ಯದರ್ಶಿಯಾಗಿ ಹಾಗೂ ಕೆಸಿಎಫ್ ಕತಾರ್ ರಾಷ್ಟ್ರೀಯ ಸಮಿತಿಯ ಅಝೀಝಿಯಾ ವಲಯ ಸನಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

- Advertisement -

ಮೃತರು ತಾಯಿ, ಪತ್ನಿ, ನಾಲ್ವರು ಸಹೋದರರು, ಇಬ್ಬರು ಸಹೋದರಿಯರು, ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

- Advertisement -
Share this Article
Leave a comment
adbanner