ಆಸ್ಕರ್ ಅರ್ಹತಾ ಸುತ್ತಿನಲ್ಲಿ 2 ವಿಭಾಗದಲ್ಲಿ ಪ್ರವೇಶ ಪಡೆದ ಕಾಂತಾರ!

ಕುಂದಾಪುರ ಕೆರಾಡಿಯ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುರುವ ಚಿತ್ರ ಬಿಡುಗಡೆಯಾದಾಗಲಿಂದಲೂ ಸಾಕಷ್ಟು ದಾಖಲೆ ಸೃಷ್ಟಿಸಿತ್ತು.

admin
2 Min Read

ಕುಂದಾಪುರ: ಹೊಸ ಹೊಸ ದಾಖಲೆಗಳನ್ನು ಸೃಷ್ಠಿಸುತ್ತಾ 100 ದಿನ ಪೂರೈಸಿರುವ ‘ಕಾಂತಾರ’ಸಿನಿಮಾ ಇದೀಗ ಆಸ್ಕರ್ ಪ್ರಶಸ್ತಿಯ ಅರ್ಹತಾ ಸುತ್ತಿಗೆ ಪ್ರವೇಶ ಪಡೆದಿದೆ. ಈ ಮೂಲಕ ಕನ್ನಡದ ಸೂಪರ್ ಹಿಟ್ ‘ಕಾಂತಾರ ಮತ್ತೊಂದು ಮೈಲಿಗಲ್ಲು ನಿರ್ಮಿಸಲು ಸಜ್ಜಾಗಿದೆ.

ಕನ್ನಡದ ಹೆಮ್ಮೆಯ ‘ಕಾಂತಾರ‘ ಆಸ್ಕರ್ ರೇಸ್ಗೆ ಎಂಟ್ರಿ ಕೊಟ್ಟಿದ್ದಲ್ಲದೇ ಎರಡು ವಿಭಾಗಗಳಲ್ಲಿ ಅರ್ಹತೆ ಪಡೆದುಕೊಂಡಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ವಿಭಾಗದಲ್ಲಿ ‘ಕಾಂತಾರಾ ಅರ್ಹತಾ ಸುತ್ತು ಪಾಸ್ ಮಾಡಿದ್ದು, ಕನ್ನಡಿಗರ ಖುಷಿಯನ್ನು ಹೆಚ್ಚಿಸಿದೆ. ಕುಂದಾಪುರ ಕೆರಾಡಿಯ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುರುವ ಚಿತ್ರ ಬಿಡುಗಡೆಯಾದಾಗಲಿಂದಲೂ ಸಾಕಷ್ಟು ದಾಖಲೆ ಸೃಷ್ಟಿಸಿತ್ತು.

ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಮಂಗಳವಾರ ಟ್ವೀಟ್ ಸಂತಸ ಹಂಚಿಕೊಂಡಿದ್ದಾರೆ. ‘ಕಾಂತಾರ’ ಚಿತ್ರವು 2 ಆಸ್ಕರ್ ಅರ್ಹತೆಗಳನ್ನು ಪಡೆದಿರುವ ವಿಚಾರ ತಿಳಿಸಲು ನಮಗೆ ಖುಷಿಯಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು’ಎಂದು ಹೇಳಿದ್ದಾರೆ.

ಆಸ್ಕರ್ ರೇಸ್ನಲ್ಲಿರುವ 301 ಸಿನಿಮಾಗಳು ಅರ್ಹತಾ ಸುತ್ತನ್ನು ಪಾಸ್ ಮಾಡಿವೆ. ಆಸ್ಕರ್ ಸದಸ್ಯರು ಮತ ಚಲಾಯಿಸಿದರೆ ‘ಕಾಂತಾರ ಸಿನಿಮಾ ಮುಖ್ಯ ನಾಮಿನೇಷನ್ಗೆ ಎಂಟ್ರಿ ಕೊಡಲಿದೆ. ಇನ್ನೊಂದು ಹೆಜ್ಜೆ ಇಟ್ಟರೆ ‘ಕಾಂತಾರ’ ಸಿನಿಮಾಗೆ ಪ್ರತಿಷ್ಠಿತ ಪ್ರಶಸ್ತಿಯ ಗರಿ ಸಿಗಲಿದೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆದರೆ ಕನ್ನಡದ ‘ಕಾಂತಾರ’ ಮಹತ್ವವ ಸಾಧನೆ ಮಾಡಿದ ಚಿತ್ರವಾಗಿ ಹೊರಹೊಮ್ಮಲಿದೆ.

- Advertisement -

‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ ಅಡಿ ಮೂಡಿಬಂದಿರುವ ‘ಕಾಂತಾರದಲ್ಲಿ ಕರಾವಳಿಯ ಸಂಸ್ಕೃತಿ ಕಂಬಳ, ಭೂತಕೋಲ, ದೈವಾರಾಧನೆ ಬಗ್ಗೆಅದ್ಭುತವಾಗಿ ಕಟ್ಟಿಕೊಡಲಾಗಿದೆ. ರಿಷಬ್ ಶೆಟ್ಟಿಗೆ ನಾಯಕಿಯಾಗಿ ಸಪ್ತಮಿಗೌಡ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ, ರಘು ಪಾಂಡೇಶ್ವರ, ಯೋಗೀಶ್ ಬಂಕೇಶ್ವರ, ಮಾನಸಿ ಸುಧೀರ್ ಸೇರಿದಂತೆ ಹಲವಾರು ನಟ-ನಟಿಯರು ಅಭಿನಯಿಸಿದ್ದಾರೆ.

ಕೇವಲ 18 ಕೋಟಿ ರೂ.ನಲ್ಲಿ ನಿರ್ಮಿಸಿದ ‘ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 400 ಕೋಟಿ ರೂ.ಗೂ ಹೆಚ್ಚಿ ಗಳಿಕೆ ಮಾಡಿದೆ. ಅಮೆಜಾನ್ ಪ್ರೈಮ್ನಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ರಿಲೀಸ್ ಆದರೆ, ನೆಟ್ಫ್ಲಿಕ್ಸ್ನಲ್ಲಿ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದೆ. ಜೊತೆಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ‘ಸ್ಟಾರ್ ಸುವರ್ಣದಲ್ಲಿ ‘ಕಾಂತಾರ’ ಬಿಡುಗಡೆಯಾಗುತ್ತಿದೆ.

- Advertisement -
TAGGED:
Share this Article
Leave a comment
adbanner