ಭಟ್ಕಳ: ಬಾಲಕನ ಅಪಹರಣ ಪ್ರಕರಣ; ಮೂವರ ಬಂಧನ; ಸಂಬಂಧಿಕರ ಕೈವಾಡ..!

ಪ್ರಕರಣ ಪ್ರಮುಖ ಆರೋಪಿ, ಬಾಲಕನ ಅಜ್ಜ (ಅಮ್ಮನ ಸೋದರ ಮಾವ) ಇನಾಯತ್ ಉಲ್ಲಾ, ಸೌದಿ ಅರೇಬಿಯಾ ದೇಶದಲ್ಲಿದ್ದಾರೆ. ಅವರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

News Desk
1 Min Read

ಭಟ್ಕಳ: ಪಟ್ಟಣದ ಆಜಾದ್ ನಗರದಿಂದ ಎಂಟು ವರ್ಷದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂವರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಪ್ರಕರಣ ಪ್ರಮುಖ ಆರೋಪಿ, ಬಾಲಕನ ಅಜ್ಜ (ಅಮ್ಮನ ಸೋದರ ಮಾವ) ಇನಾಯತ್ ಉಲ್ಲಾ, ಸೌದಿ ಅರೇಬಿಯಾ ದೇಶದಲ್ಲಿದ್ದಾರೆ. ಅವರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸೋಮವಾರ ಬೆಳಿಗ್ಗೆ ಗೋವಾದ ಕಲಂಗುಟ್‌ನಲ್ಲಿ ಬಾಲಕನನ್ನು ಪೊಲೀಸರು ರಕ್ಷಿಸಿ ಪಾಲಕರ ಮಡಿಲು ಸೇರಿಸಿದ್ದರು. ಅಲ್ಲೇ ಸೆರೆಸಿಕ್ಕಿದ್ದ ಆರೋಪಿ ಮಹಮ್ಮದ್ ಅನೀಸ್ ನೀಡಿದ ಮಾಹಿತಿಯ ಪ್ರಕಾರ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು ಮತ್ತಿಬ್ಬರನ್ನು ಭಟ್ಕಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಟ್ಕಳದ ಹೆಬಳೆ ನಿವಾಸಿಗಳಾದ ಅಬ್ರಾರ್ ಶೇಖ್ ಹಾಗೂ ಮೊಹಮ್ಮದ್ ಮಂಝೂರ್ ಬಂಧಿತರು.

ಅಪಹರಣವಾದ ಬಾಲಕನ ತಂದೆ ಹಾಗೂ ಅಜ್ಜ (ಅಮ್ಮನ ಮಾವ) ಇನಾಯತ್ ಉಲ್ಲಾ ಜೊತೆ ಹಣದ ವ್ಯವಹಾರ ನಡೆದಿತ್ತು. ಹಣ ಮರುಪಾವತಿ ಮಾಡಲು ಒತ್ತಡ ಹೇರುವ ಸಲುವಾಗಿ ಬಾಲಕನನ್ನು ಇನಾಯತ್ ಅಪಹರಣ ಮಾಡಿಸಿದ್ದರು ಎಂದು ವಿಚಾರಣೆಯಲ್ಲಿ ತಿಳಿದುಬಂದಿತ್ತು. ಕೃತ್ಯದಲ್ಲಿ ಒಟ್ಟು ಐವರು ಭಾಗಿಯಾಗಿರುವ ಬಗ್ಗೆ ಮೇಲ್ನೋಟಕ್ಕೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮೂವರ ಬಂಧನವಾಗಿದ್ದು, ಮತ್ತಿಬ್ಬರಿಗೆ ಕಾರ್ಯಾಚರಣೆ ನಡೆಸಿದ್ದಾರೆ.

- Advertisement -

ಘಟನೆ ನಡೆದು 30 ಗಂಟೆಗಳ ಒಳಗಾಗಿ ಬಾಲಕನನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಭಟ್ಕಳಕ್ಕೆ ಕರೆತಂದಿರುವುದು ಮತ್ತು ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -
TAGGED:
Share this Article
Leave a comment
adbanner