ಮಂಗಳೂರು, ಫೆ.13: ಭಾರತದಿಂದ ದುಬೈಗೆ 2.60 ಕೋಟಿ ರೂಪಾಯಿ ಮೌಲ್ಯದ ವಜ್ರಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಭಾರತೀಯ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ದುಬೈಗೆ ತೆರಳುತ್ತಿದ್ದ ಭಟ್ಕಳ ಮೂಲದ ಅನಾಸ್ ಮತ್ತು ಅಮ್ಮಾರ್ ಯಾವುದೇ ಅನುಮಾನ ಬಾರದಂತೆ ತಮ್ಮ ಶೂ ಹಾಗೂ ಬ್ಯಾಗ್‌ನ ಕೆಳಗೆ ವಜ್ರಗಳನ್ನು ಬಚ್ಚಿಟ್ಟಿದ್ದರು.
ವಿಮಾನ ನಿಲ್ದಾಣದಲ್ಲಿ ವಲಸೆ ತಪಾಸಣೆ ವೇಳೆ ಅಕ್ರಮ ವಜ್ರಗಳು ಪತ್ತೆಯಾಗಿವೆ. ಮುಂಬೈನಿಂದ ವಜ್ರಗಳನ್ನು ತರಲಾಗಿತ್ತು ಎನ್ನಲಾಗಿದೆ.