ಭಟ್ಕಳ: ಕಿಡ್ನಾಪ್‌ ಆಗಿದ್ದ 8 ವರ್ಷದ ಬಾಲಕನ ಪತ್ತೆ: ಗೋವಾದಿಂದ ಕರೆತಂದ ಪೊಲೀಸರು

ಗೋವಾ ಕಲ್ಲಂಗುಟ್‌ನಲ್ಲಿ ಬಾಲಕ ಪತ್ತೆಯಾಗಿದ್ದು,ಆತನನ್ನು ಸೋಮವಾರ ಬೆಳಗ್ಗೆ ಭಟ್ಕಳಕ್ಕೆ ಕರೆತರಲಾಗಿದೆ.

News Desk
1 Min Read

ಭಟ್ಕಳ:  ಅಪರಹಣವಾಗಿದ್ದ 8 ವರ್ಷದ ಬಾಲಕನನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

ಗೋವಾ ಕಲ್ಲಂಗುಟ್‌ನಲ್ಲಿ ಬಾಲಕ ಪತ್ತೆಯಾಗಿದ್ದು,ಆತನನ್ನು ಸೋಮವಾರ ಬೆಳಗ್ಗೆ ಭಟ್ಕಳಕ್ಕೆ ಕರೆತರಲಾಗಿದೆ.

ಕೌಟುಂಬಿಕ ದ್ವೇಷದಿಂದ ಸಂಬಂಧಿಕರೇ ಈ ಕೃತ್ಯ ಎಸಗಿರುವುದು ಖಚಿತವಾಗಿದೆ. ಸದ್ಯ ಆತನನ್ನು ಅಪಹರಣ ಮಾಡಿದ ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಘಟನೆ ವಿವರ
ಆ.,20 ರ ರಾತ್ರಿ 8 ಗಂಟೆಗೆ ಬ್ರೆಡ್ ತರಲು ಹೋದ 8 ವರ್ಷದ ಬಾಲಕನನ್ನು ಪಟ್ಟಣದ‌ ಆಜಾದ್ ನಗರದಲ್ಲಿ ಇಕೊ ವಾನದಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದರು. ಅದರ ವಿಡಿಯೋ ವೈರಲ್ ಆಗಿತ್ತು. ಪ್ರಕರಣ ಪತ್ತೆಗೆ ಐದು ತಂಡ ರಚಿಸಲಾಗಿತ್ತು.

- Advertisement -

ಬಾಲಕನನ್ನು ಮಾರುತಿ ಸುಜುಕಿ ಇಕೋ ವಾಹನದಲ್ಲಿ ಆಜಾದ್ ನಗರದಿಂದ ಅಪಹರಿಸಿ, ಬಳಿಕ ಮತ್ತೊಂದು ವಾಹನ ಬಳಸಿ ಗೋವಾಕ್ಕೆ ಬಾಲಕನನ್ನ ಕರೆದೊಯ್ಯಲಾಗಿತ್ತು. ಸೋಮವಾರ ಬೆಳಗ್ಗೆ ಅಲ್ಲಿನ ಕಲಂಗುಟ್ ಬೀಚ್ ನ ರೂಮೊಂದರಲ್ಲಿ ಬಾಲಕ ಓರ್ವ ಆರೋಪಿ ಅನೀಶ್ (29) ಎಂಬಾತನೊಂದಿಗೆ ಪತ್ತೆಯಾಗಿದ್ದಾನೆ.

ಬಾಲಕನ ತಾಯಿಯ ಸೋದರ ಮಾವ (ಬಾಲಕನ ಅಜ್ಜ), ಸೌದಿಅರೇಬಿಯಾದಲ್ಲಿರುವ ಇನಾಯತ್ ಉಲ್ಲಾ ಎಂಬಾತನ ಸೂಚನೆಯ ಮೇರೆಗೆ ಈ ಅಪಹರಣ ನಡೆದಿದೆ. ಐವರು ಆರೋಪಿಗಳು ಇದರಲ್ಲಿ ಭಾಗಿಯಾಗಿದ್ದರು ಎಂಬುದು ತಿಳಿದು ಬಂದಿದೆ. ಓರ್ವನನ್ನು ಬಂಧಿಸಲಾಗಿದ್ದು, ನಾಲ್ವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

- Advertisement -
Share this Article
Leave a comment
adbanner