ಬೈಂದೂರು, ಫೆ.9: ತೆಂಗಿನ ಮರದಿಂದ ಕೆಳಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ಉಪ್ಪುಂದ ಸಮೀಪದ ಗೋಳಿಹೊಳೆ ಗ್ರಾಮದಲ್ಲಿ ವರದಿಯಾಗಿದೆ.
ಮೃತರನ್ನು ಕೊಡಿಯಾಲ್ ಕೇರಿ ಮೆಲ್ ನಿವಾಸಿ ಚಂದ್ರ ಮರಾಟಿ (38) ಎಂದು ಗುರುತಿಸಲಾಗಿದೆ.
ಚಂದ್ರು ಕೃಷಿಕರಾಗಿದ್ದರು. ಫೆಬ್ರವರಿ 7ರಂದು ಸಂಜೆ ತೆಂಗಿನಕಾಯಿ ಕೀಳುವ ಸಲುವಾಗಿ ತೆಂಗಿನ ಮರ ಹತ್ತಿದ್ದರು. ತೆಂಗಿನಕಾಯಿ ಕೀಳುತ್ತಿದ್ದಾಗ ಆಕಸ್ಮಿಕವಾಗಿ ಮರದಿಂದ ಕೆಳಗೆ ಬಿದ್ದಿದ್ದಾರೆ.
ಬೈಂದೂರು ಸಮುದಾಯ ಕೇಂದ್ರಕ್ಕೆ ಕರೆದೊಯ್ದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.
- Advertisement -
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.