ತೀವ್ರ ಚಳಿ ಜ್ವರದಿಂದ ಬಳಲುತ್ತಿದ್ದ ನಾಲ್ಕು ತಿಂಗಳ ಮಗುವೊಂದು ಮೃತಪಟ್ಟ ದಾರುಣ ಘಟನೆ ಯಡ್ತರೆ ಗ್ರಾಮದ ಉದುರು ಎಂಬಲ್ಲಿ ನಡೆದಿದೆ.
ಮೃತ ಮಗುವನ್ನು ಉಪ್ಪುಂದ ಗ್ರಾಮದ ಶೇಖರ ಖಾರ್ವಿ ಹಾಗೂ ಶೈಲಾ ದಂಪತಿಯ ನಾಲ್ಕು ತಿಂಗಳ ಹೆಣ್ಣುಮಗು ಸಾನ್ವಿತಾ ಎಂದು ಗುರುತಿಸಲಾಗಿದೆ. ಶೈಲಾ ಹೆರಿಗೆಯಾಗಿ ತಾಯಿ ಮನೆಯಾದ ಉದುರುವಿನಲ್ಲಿ ವಾಸವಾಗಿದ್ದು, ಆ.27ರಂದು ರಾತ್ರಿ ಮಗು ತೀವ್ರ ಚಳಿ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಬೈಂದೂರು ಅಂಜಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ರಾತ್ರಿ 12:15ಕ್ಕೆ ಕರೆದುಕೊಂಡು ಹೋದಾಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ದಾರಿಮಧ್ಯದಲ್ಲಿಯೇ ಸಾನ್ವಿತಾ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .