ಶಿರೂರು ಟೋಲ್ ಗೇಟ್ ನಲ್ಲಿ ಆಂಬ್ಯುಲೆನ್ಸ್ ಪಲ್ಟಿ: ನಾಲ್ವರ ಸಾವು

ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಸಾಗಿಸುತ್ತಿದ್ದ ಅಂಬುಲೈನ್ಸ್ ಅತಿ ವೇಗದಿಂದ ಟೋಲ್ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನಾಲ್ವರು ಸಾವನ್ನಪ್ಪಿದ್ದಾರೆ.

News Desk
1 Min Read

ಬೈಂದೂರು: ಉತ್ತರಕನ್ನಡ ಜಿಲ್ಲೆ ಹೊನ್ನಾವರದಿಂದ ರೋಗಿಗಳನ್ನು ಸಾಗಿಸುತ್ತಿದ್ದ ಅಂಬುಲೈನ್ಸ್ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಫ್ಲಾಜಾ ಬಳಿ ಪಲ್ಟಿಯಾದ ಘಟನೆ ಬೈಂದೂರು ತಾಲೂಕಿನ ಶಿರೂರು ಟೋಲ್ ಬಳಿ ಬುಧವಾರ ಸಂಜೆ ನಡೆದಿದೆ. ಈ ದುರ್ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಸಾಗಿಸುತ್ತಿದ್ದ ಅಂಬುಲೈನ್ಸ್ ಅತಿ ವೇಗದಿಂದ ಟೋಲ್ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಆಂಬುಲೆನ್ಸ್ ವಾಹನ ಬರುತ್ತಿರುವ ಸೂಚನೆಯಿದ್ದ ಕಾರಣ ಟೋಲ್ ಸಿಬ್ಬಂದಿಗಳು ಬ್ಯಾರಿಕೇಡ್ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು‌ ಮಾಡಿಕೊಡುತ್ತಿರುವಾಗಲೇ ಅಂಬುಲೆನ್ಸ್ ಪಲ್ಟಿಯಾಗಿ ಟೋಲ್ ಬಳಿ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಇದರಲ್ಲಿ ನಾಲ್ವರು ಸಾವನ್ನಪ್ಪಿ ಇನ್ನೋರ್ವ ಗಂಭೀರ ಗಾಯಗೊಂಡಿದ್ದು ಕುಂದಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ.

- Advertisement -
Share this Article
Leave a comment
adbanner