ಕುಂದಾಪುರ: ಆಯತಪ್ಪಿ ಸಮುದ್ರಕ್ಕೆ ಬಿದ್ದು ವ್ಯಕ್ತಿ ಸಾವು

ಕಿರಿಮಂಜೇಶ್ವರ ಗ್ರಾಮದ ಮೋಟಿಮನೆ ನಿವಾಸಿ ಸತೀಶ್ ಖಾರ್ವಿ (44) ಮೃತಪಟ್ಟವರು.

News Desk
0 Min Read

ಬೈಂದೂರು, ಸೆ 04 : ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಉಪ್ಪುಂದ ಕಿರಿಮಂಜೇಶ್ವರ ಗ್ರಾಮದ ಕೊಡೇರಿಯಲ್ಲಿ ನಡೆದಿದೆ.

ಕಿರಿಮಂಜೇಶ್ವರ ಗ್ರಾಮದ ಮೋಟಿಮನೆ ನಿವಾಸಿ ಸತೀಶ್ ಖಾರ್ವಿ (44) ಮೃತಪಟ್ಟವರು. ರಾಮಚಂದ್ರ ಎಂಬವರ ದೋಣಿಯಲ್ಲಿ ಗಣೇಶ್ ಎಂಬವರ ಜತೆ ಸತೀಶ್ ಖಾರ್ವಿ ಅವರು ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಈ ವೇಳೆ ದೊಡ್ಡದಾದ ಅಲೆಯೊಂದು ದೋಣಿಗೆ ಅಪ್ಪಳಿಸಿದೆ. ಅಲೆ ಅಪ್ಪಳಿಸಿದ ರಭಸಕ್ಕೆ ಸತೀಶ್ ಖಾರ್ವಿ ಅವರು ಆಯತಪ್ಪಿ ಸಮುದ್ರದ ನೀರಿಗೆ ಬಿದ್ದು ಮೃತಪಟ್ಟರು.

ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
TAGGED:
Share this Article
Leave a comment
adbanner