ಕಾರ್ಕಳ: ನಾರಾವಿ ಭಾಗದಲ್ಲಿ ಜಲಸ್ಪೋಟ-ಉಕ್ಕಿ ಹರಿದ ಸುವರ್ಣ ನದಿ

ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯಲ್ಲಿ ನದಿಯಲ್ಲಿ ಏಕಾಏಕಿ ಭಾರಿ ಕೆಸರು ನೀರಿನಿಂದ ನೀರಿನ ಹರಿವು ಉಂಟಾದ ಸಂದರ್ಭದಲ್ಲಿ ಭೂ ಕುಸಿತ ವಾಗಿರುವ ಸಂಶಯ ವ್ಯಕ್ತವಾಗಿದೆ.

News Desk
1 Min Read

ಕಾರ್ಕಳ, ಆ 03: ಪಶ್ಚಿಮ ಘಟ್ಟ ಪ್ರದೇಶ ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ನಾರಾವಿ ಭಾಗದಲ್ಲಿ ಸಂಜೆ 4 ಘಂಟೆ ವೇಳೆಗೆ ಭಾರಿ ಸ್ಪೋಟದ ಸದ್ದು ಕೇಳಿ ಬಂದಿದ್ದು ಸತತವಾಗಿ ಮಳೆ ಸುರಿದಿದೆ.ಇದರ ಜೊತೆ ಸುವರ್ಣ ನದಿಯಲ್ಲಿ ಭಾರಿ ಕೆಸರು ಮಿಶ್ರಿತ ನೀರು ಹರಿಯುತಿತ್ತು ಎನ್ನಲಾಗಿದೆ. ಸ್ಥಳೀಯರು ಹೇಳುವಂತೆ ಜಲಸ್ಪೋಟ ವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭೂ ಕುಸಿತವಾಗಿರುವ ಶಂಕೆ, ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯಲ್ಲಿ ನದಿಯಲ್ಲಿ ಏಕಾಏಕಿ ಭಾರಿ ಕೆಸರು ನೀರಿನಿಂದ ನೀರಿನ ಹರಿವು ಉಂಟಾದ ಸಂದರ್ಭದಲ್ಲಿ ಭೂ ಕುಸಿತ ವಾಗಿರುವ ಸಂಶಯ ವ್ಯಕ್ತವಾಗಿದೆ. ಈ ಭಾಗದಲ್ಲಿ ಮಳೆ ನಿರಂತರ ಸುರಿಯುತಿದ್ದು ಮಾಹಿತಿ ಸಾಧ್ಯವಾಗಿಲ್ಲ.

ನೂರಾಲ್ಬೆಟ್ಟು ನಾರಾವಿ ಕುತ್ಲೂರು , ಈದು ಮೂರು ಗ್ರಾಮಗಳು 90% ಅರಣ್ಯ ಪ್ರದೇಶಗಳಿಂದ ಅವೃತವಾದ ಪ್ರದೇಶಗಳಾಗಿವೆ. ನಾರಾವಿ ಸೂರ್ಯ ನಾರಾಯಣ ದೇವಸ್ಥಾನದ ಬಳಿ ಹರಿಯುತ್ತಿರುವ ಸುವರ್ಣ ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿದ್ದು ದೇವಾಲಯ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು

ಮೊದಲ ಬಾರಿ ಜಲಾವೃತವಾದ ಸೇತುವೆ:

ಕಾರ್ಕಳ ಬೆಳ್ತಂಗಡಿ ರಾಜ್ಯ ಹೆದ್ದಾರಿ ಯ ನಾರಾವಿಯ ಅರಸಿಕಟ್ಟೆ ಎಂಬಲ್ಲಿ ಸೇತುವೆ ಮೇಲ್ಭಗದಲ್ಲಿ ನೀರು ಹರಿದಿದ್ದು ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸಲು ತೊಂದರೆ ಉಂಟಾಗಿತ್ತು. ಸೇತುವೆ ಮೇಲ್ಬಾಗದಲ್ಲಿ ಎಕಾಏಕಿ ನೀರು ಹೆಚ್ಚಾಗ ತೊಡಗಿದಾಗ ಭಾರಿ ಟ್ರಾಫಿಕ್ ಜಾಂ ಉಂಟಾಗಿತ್ತು. ಬಿರ್ಮೊಟ್ಟು , ರಾಮೆರಗುತ್ತು ಸುತ್ತಮುತ್ತ , ನಾರಾವಿ ಯ ಕೆಳಗಿನ ಪೇಟೆ ಯ ಸುತ್ತಮುತ್ತಲಿನ ತೋಟಗಳಿಗೆ ನೀರು ನುಗ್ಗಿತ್ತು‌.

- Advertisement -

- Advertisement -
TAGGED: ,
Share this Article
Leave a comment
adbanner