ನವಯುಗ ಕಂಪೆನಿಯ ಎಡವಟ್ಟು: ಫ್ಲೈಓವರ್’ನಲ್ಲಿ ಪ್ರವಹಿಸುತ್ತಿರುವ ವಿದ್ಯುತ್ !

ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿರುವ ಫ್ಲೈಓವರ್ ತಡೆಗೋಡೆ ಭೀಮ್ ನಲ್ಲಿ ವಿದ್ಯುತ್ ಹರಿಯುತ್ತಿದ್ದು, ಟೆಸ್ಟರ್ ಮೂಲಕ ಪರಿಶೀಲಿಸಿದಾಗ ವಿದ್ಯುತ್ ಕಾಣಿಸಿಕೊಂಡಿದೆ.

News Desk
1 Min Read

ಕುಂದಾಪುರ: ರಾಷ್ಟೀಯ ಹೆದ್ದಾರಿ ಫ್ಲೈಓವರ್ ತಡೆಗೋಡೆಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದು, ಟೆಸ್ಟರ್ ಮೂಲಕ ಪರಿಶೀಲಿಸಿದಾಗ ಬೆಳಕು ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿರುವ ಫ್ಲೈಓವರ್ ತಡೆಗೋಡೆ ಭೀಮ್ ನಲ್ಲಿ ವಿದ್ಯುತ್ ಹರಿಯುತ್ತಿದ್ದು, ಟೆಸ್ಟರ್ ಮೂಲಕ ಪರಿಶೀಲಿಸಿದಾಗ ವಿದ್ಯುತ್ ಕಾಣಿಸಿಕೊಂಡಿದೆ.

ನವಯುಗ ಕನ್ ಸ್ಟ್ರಕ್ಷನ್ ನವರು ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಬಳಿಕವೂ ದಾರಿದೀಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರಲಿಲ್ಲ. ಸಾರ್ವಜನಿಕರ ಹೋರಾಟದ ಬಳಿಕ ತರಾತುರಿಯಲ್ಲಿ ನಾಲ್ಕು ತಿಂಗಳ ಹಿಂದಷ್ಟೇ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಫ್ಲೈ ಓವರ್ ಮೇಲೆ ವಿದ್ಯುತ್ ಪ್ರವಹಿಸುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

- Advertisement -
TAGGED:
Share this Article
Leave a comment
adbanner