ಕುಂದಾಪುರ: ಕುಟುಂಬ ತೀರ್ಥಯಾತ್ರೆಗೆ ಹೋಗಿದ್ದಾಗ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು

ಶುಕ್ರವಾರ ಮನೆಗೆ ವಾಪಸ್ಸಾದ ಕುಟುಂಬಕ್ಕೆ ಮನೆಯಲ್ಲಿ ಹಿಂಬದಿ ಬಾಗಿಲು ಒಡೆದಿರುವುದು ಗೊತ್ತಾಗಿದೆ.

News Desk
1 Min Read

ಕುಂದಾಪುರ, ಆ 07: ಮನೆಮಂದಿ ಕುಟುಂಬ ಸಮೇತ ತೀರ್ಥಯಾತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಮನೆಗೆ ಕನ್ನ ಹಾಕಿದ ಕಳ್ಳರು ಲಕ್ಷಾಂತರ ರೂ. ನಗ ಮತ್ತು ನಗದು ಕಳವುಗೈದ ಘಟನೆ ಕುಂಭಾಶಿ ಗ್ರಾಮದ ವಿನಾಯಕ ನಗರದಲ್ಲಿ ನಡೆದಿದೆ.

ಇಲ್ಲಿನ ಶ್ರೀದೇವಿ ನಿಲಯದ ಮಂಜುನಾಥ ಜೋಗಿ ಮತ್ತು ಮನೆಯವರು ಕುಟುಂಬ ಸಹಿತ ಪಂಡರಾಪುರ ಹಾಗೂ ಶಿರ್ಡಿಗೆ ತೀರ್ಥಯಾತ್ರೆಗೆಂದು ಜುಲೈ 29ರಿಂದ ಆಗಸ್ಟ್‌ 5 ತೆರಳಿದ್ದರು.

ಶುಕ್ರವಾರ ಮನೆಗೆ ವಾಪಸ್ಸಾದ ಕುಟುಂಬಕ್ಕೆ ಮನೆಯಲ್ಲಿ ಹಿಂಬದಿ ಬಾಗಿಲು ಒಡೆದಿರುವುದು ಗೊತ್ತಾಗಿದೆ. ಬಳಿಕ ಒಳ ಬಂದು ನೋಡಿದರೆ ಕಪಾಟಿನಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಕಪಾಟಿನಲ್ಲಿದ್ದ ೮ ಗ್ರಾಂ ಚಿನ್ನದ ಬ್ರಾಸ್‌ಲೆಟ್, ೧೨ ಗ್ರಾಂನ ಚಿನ್ನದ ಸರ, ೪ ಗ್ರಾಂನ ಉಂಗುರ, ೩ ಗ್ರಾಂನ ಉಂಗುರ ಸೇರಿದಂತೆ ಒಟ್ಟು ೧.೨೦ ಲಕ್ಷ ರೂ. ಮೌಲ್ಯದ ೨೭ ಗ್ರಾಂ ಚಿನ್ನಾಭರಣ, ೧೩೫೦೦ ರೂ. ನಗದು ಕಳವಾಗಿತ್ತು.ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

- Advertisement -
TAGGED: ,
Share this Article
1 Comment
adbanner