ಮಂಗಳೂರು ಪಬ್‌ನಲ್ಲಿ ಪಾರ್ಟಿ: ಬಜರಂಗ ದಳ ಕಾರ್ಯಕರ್ತರಿಂದ ತಡೆ

ಮಂಗಳೂರಿನ ರಿ-ಸೈಕಲ್‌ ದಿ ಲಾಂಜ್‌ ಪಬ್‌ನಲ್ಲಿ ನಗರದ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಪಾರ್ಟಿ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಕುಡಿದು ಯುವಕ-ಯುವತಿಯರು ಮೋಜು ಮಸ್ತಿ ಮಾಡುತ್ತಿದ್ದಾರೆಂಬ ಆರೋಪ ಹಿನ್ನೆಲೆಯಲ್ಲಿ ಬಜರಂಗ ದಳ ಕಾರ್ಯಕರ್ತರು ಪಬ್‌ಗೆ ಪ್ರವೇಶಿಸಿ ತಡೆಯೊಡ್ಡಿದ್ದಾರೆ.

News Desk
1 Min Read
Highlights
  • ಪಬ್‌ವೊಂದರಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿ
  • ಕುಡಿದು ಯುವಕ-ಯುವತಿಯರ ಮೋಜು ಮಸ್ತಿ ಆರೋಪ
  • ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು

ಮಂಗಳೂರು: ಬಲ್ಮಠದ ಪಬ್‌ವೊಂದರಲ್ಲಿಕಾಲೇಜು ವಿದ್ಯಾರ್ಥಿಗಳು ಪಾರ್ಟಿ ಮಾಡುತ್ತಿದ್ದಾಗ ಬಜರಂಗ ದಳ ಕಾರ್ಯಕರ್ತರು ದಾಳಿ ನಡೆಸಿ ತಡೆಯೊಡ್ಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಎಲ್ಲರನ್ನೂ ಚದುರಿಸಿದ್ದಾರೆ.

ನಗರದ ಬಲ್ಮಠದ ರಿ-ಸೈಕಲ್‌ ದಿ ಲಾಂಜ್‌ ಪಬ್‌ನಲ್ಲಿ ನಗರದ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಬೀಳ್ಕೊಡುಗೆ ಕಾರ್ಯಕ್ರಮದ ಅಂಗವಾಗಿ ಪಾರ್ಟಿ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾನಮತ್ತರಾಗಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂಬ ಆರೋಪ ಹಿನ್ನೆಲೆಯಲ್ಲಿ ಬಜರಂಗ ದಳ ಕಾರ್ಯಕರ್ತರು ಪಬ್‌ಗೆ ಪ್ರವೇಶಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಕೆಲ ಕಾಲ ಪಬ್‌ನಲ್ಲಿಗೊಂದಲ ನಿರ್ಮಾಣವಾಗಿತ್ತು. ಬಳಿಕ ಎಲ್ಲವಿದ್ಯಾರ್ಥಿಗಳನ್ನು ಕಳುಹಿಸಲಾಯಿತು.

ಮಂಗಳೂರು ಪಬ್‌ನಲ್ಲಿ ಪಾರ್ಟಿಗೆ ಬಜರಂಗ ದಳ ಕಾರ್ಯಕರ್ತರಿಂದ ತಡೆ

ಅಸಭ್ಯ ವರ್ತನೆ ಹಿನ್ನಲೆ: ಕೆಲ ದಿನಗಳ ಹಿಂದಷ್ಟೇ ನಗರದ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಅಸಭ್ಯ ವರ್ತನೆ ವಿಡಿಯೋ ವೈರಲ್‌ ಆಗಿತ್ತು. ಸೋಮವಾರ ರಾತ್ರಿ ಅದೇ ಕಾಲೇಜಿನ 30ಕ್ಕೂ ಅಧಿಕ ವಿದ್ಯಾರ್ಥಿಗಳು ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಬಜರಂಗ ದಳ ಕಾರ್ಯಕರ್ತರು ತಡೆಯೊಡ್ಡಿದ್ದು, ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಸಂಘಟನೆ ಕಾರ್ಯಕರ್ತರನ್ನು ಚದುರಿಸಿದ್ದಾರೆ.

ಹಿಂದೆಯೂ ನಡೆದಿತ್ತು: ಮಂಗಳೂರಿನಲ್ಲಿಪಬ್‌ ದಾಳಿ ಹೊಸತೇನಲ್ಲ. 2009ರಲ್ಲಿ ಬಲ್ಮಠದಲ್ಲಿರುವ ಇದೇ ಪಬ್‌ಗೆ ಹಿಂದೂ ಸಂಘಟನೆಗಳು ದಾಳಿ ನಡೆಸಿದ್ದು, ದೇಶಾದ್ಯಂತ ಭಾರಿ ಚರ್ಚೆಯಾಗಿತ್ತು. 2013ರಲ್ಲಿಪಡೀಲ್‌ನ ಹೋಂ ಸ್ಟೇ ಮೇಲೂ ದಾಳಿ ನಡೆದಿದ್ದು, ದೇಶಾದ್ಯಂತ ದೊಡ್ಡ ಚರ್ಚೆ ನಡೆದಿತ್ತು.

- Advertisement -

- Advertisement -
Share this Article
Leave a comment
adbanner