ಮಂಗಳೂರು: ಫಾಝಿಲ್ ಹತ್ಯೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡಿದ ಆರೋಪ – 5 ಪ್ರಕರಣ ದಾಖಲು

ಕರಾವಳಿಯಲ್ಲಿ ದೊಡ್ಡಮಟ್ಟದ ಕೋಮು ಸಂಘರ್ಷ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ರಾಜ್ಯ ಗುಪ್ತಚರ ದಳದ ಮಾಹಿತಿ ಎಂಬ ಸುಳ್ಳು ಸಂದೇಶ

News Desk
1 Min Read

ಮಂಗಳೂರು, ಜು 31: ಸುರತ್ಕಲ್‌ನಲ್ಲಿ ನಡೆದ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಮತ್ತು ಕಾಮೆಂಟ್‌ಗಳನ್ನು ಮಾಡಿರುವ ವ್ಯಕ್ತಿಗಳ ವಿರುದ್ಧ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾಗಿದೆ.

ಕರಾವಳಿಯಲ್ಲಿ ದೊಡ್ಡಮಟ್ಟದ ಕೋಮು ಸಂಘರ್ಷ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ರಾಜ್ಯ ಗುಪ್ತಚರ ದಳದ ಮಾಹಿತಿ ಎಂಬ ಸುಳ್ಳು ಸಂದೇಶ, ಪ್ರವೀಣ್‌ ನೆಟ್ಟಾರ್ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡಲು ಕರೆ ನೀಡಿರುವ ಪೋಸ್ಟ್, ಸುರತ್ಕಲ್‌ನಲ್ಲಿ ನಡೆದಿರುವ ಫಾಝಿಲ್ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡುವುದಾಗಿ ಫೇಸ್‌ಬುಕ್ ಗ್ರೂಪ್‌ಗಳಲ್ಲಿ ಪೋಸ್ಟ್ ಹಾಕಿ ಚರ್ಚೆ ನಡೆಸಿದ್ದು, ಮಂಗಳೂರಿನಲ್ಲಿ ನಡೆದ ಒಂದು ಕೊಲೆಗೆ ಪ್ರತೀಕಾರವಾಗಿ 10 ಕೊಲೆ ಮಾಡುವುದಾಗಿ ಪೋಸ್ಟ್ ಹಾಕಿದ್ದು, ನಿರ್ದಿಷ್ಟ ಜಾತಿ ಮತ್ತು ಸಮುದಾಯವನ್ನು ಗುರಿಯಾಗಿಸಿಕೊಂಡು ಹತ್ಯೆಗೆ ಕರೆ ನೀಡುವ ಮೆಸೇಜ್ ಸಹಿತ ಫೇಸ್‌ಬುಕ್ ಪೋಸ್ಟ್/ ವಾಟ್ಸಪ್ ಗ್ರೂಪ್ ಚರ್ಚೆ ಮತ್ತು ಕಾಮೆಂಟ್ಸ್ ಅನ್ ದಿ ನ್ಯೂಸ್ ಕಾಲಂ, ಪ್ರಿಂಟ್ ಇಲೆಕ್ಟ್ರಾನಿಕ್ಸ್, ಯೂಟ್ಯೂಬ್, ಡಿಜಿಟಲ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಇನ್ನು ಫಾಝಿಲ್ ಹತ್ಯೆಗೆ ಸಂಬಂಧಿಸಿದಂತೆ ವಾಟ್ಸಾಪ್ ಗ್ರೋಫ್ ಗಳಲ್ಲಿ ಚರ್ಚಿಸಿರುವ ಬಗ್ಗೆಯೂ ಮಾಹಿತಿ ಬಂದಿದ್ದು ಅವುಗಳ ಮೇಲೂ ನಿಗಾ ವಹಿಸಲಾಗಿದೆ. ಆಕ್ಷೇಪಾರ್ಹ ಪೋಸ್ಟ್ ಹಾಕುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸೆನ್ ಪೊಲೀಸರು ತಿಳಿಸಿದ್ದಾರೆ.

- Advertisement -
TAGGED: ,
Share this Article
Leave a comment
adbanner