ಸುರತ್ಕಲ್ ಫ್ಲೈಓವರ್ ನಡಿ ಸಾವರ್ಕರ್ ಫೋಟೊ ಹಾಕಿದ ಸಂಘಪರಿವಾರ: ತೆರವುಗೊಳಿಸಿದ ಪೊಲೀಸರು

ಬ್ರಿಟಿಷರೊಂದಿಗೆ ಕ್ಷಮೆ ಕೇಳಿದ ಸಾವರ್ಕರ್ ಫೋಟೊವನ್ನು ಹಾಕಿದಕ್ಕೆ SDPI ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

News Desk
0 Min Read

ಮಂಗಳೂರು: ಸುರತ್ಕಲ್ ಫ್ಲೈ ಓವರ್ ನ ಫಿಲ್ಲರ್ ಒಂದಕ್ಕೆ ಸಂಘಪರಿವಾರದ ಕಾರ್ಯಕರ್ತರು ಸಾವರ್ಕರ್ ಫೋಟೋವನ್ನು ಅಳವಡಿಸಿದ್ದು, ಪೊಲೀಸರು ತೆರವುಗೊಳಿಸಿದ್ದಾರೆ.

ಬ್ರಿಟಿಷರೊಂದಿಗೆ ಕ್ಷಮೆ ಕೇಳಿದ ಸಾವರ್ಕರ್ ಫೋಟೊವನ್ನು ಹಾಕಿದಕ್ಕೆ SDPI ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಪೊಲೀಸ್ ಅಧಿಕಾರಿಗಳಿಗೆ, ಮಹಾನಗರ ಪಾಲಿಕೆ ಆಯುಕ್ತರಿಗೆ ಮಾಹಿತಿ ಕೂಡ ನೀಡಿತ್ತು. ಕೂಡಲೇ ಇದನ್ನು ತೆರವುಗೊಳಿಸಬೇಕು, ಇಲ್ಲದಿದ್ದರೆ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿತ್ತು.

ಈ ಹಿನ್ನೆಲೆಯಲ್ಲಿ ಸಾವರ್ಕರ್ ಫೋಟೋವನ್ನು ಪೊಲೀಸರು ತೆರವುಗೊಳಿಸಿದ್ದು, SDPI ಜಿಲ್ಲಾ ಸಮಿತಿಯು ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸಿದೆ.

- Advertisement -
Share this Article
1 Comment
adbanner