ನಿಜವಾದ ಆರೋಪಿಯನ್ನು ಬಂಧಿಸಿ ನನ್ನ ಪತಿಯನ್ನು ಬಿಟ್ಟುಬಿಡಿ: ಶಫೀಕ್ ಪತ್ನಿ ಅನ್ಶಿಫಾ

News Desk
2 Min Read

ಪುತ್ತೂರು: ಬಿಜೆಪಿ ಜಲ್ಲಾ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿಲಾಗಿದೆ. ಇದೀಗ ಓರ್ವ ಆರೋಪಿ ಶಫೀಕ್ ಪತ್ನಿ ಅನ್ಶಿಫಾ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

ಶಫೀಕ್ ಅಮಾಯಕ. ಆತನನ್ನ ಆರಸ್ಟ್ ಮಾಡಲಾಗಿದೆ. ಆತ PFI, SDPIನಲ್ಲಿ ಸಕ್ರಿಯನಾಗಿದ್ದ ಹಾಗಂತ ಆತ ಆರೋಪಿಯಲ್ಲ. ನಿಜವಾದ ಆರೋಪಿಯನ್ನು ಬಂಧಿಸಿ ಶಫೀಕ್ ನನ್ನ ಬಿಟ್ಟು ಬಿಡಿ ಆತ ಅಪರಾಧಿಯಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ.

ಮಂಗಳವಾರ ರಾತ್ರಿ ಪ್ರವೀಣ್ ಕುಮಾರ್ ನೆಟ್ಟಾರು ದುಷ್ಕರ್ಮಿಗಳ ಕೈಯಲ್ಲಿ ಭೀಕರವಾಗಿ ಹತ್ಯೆಯಾಗಿದ್ದರು. ಬಳಿಕ ಕರಾವಳಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ ಇಬ್ಬರು ಪ್ರಮುಖ ಆರೋಪಿಗಳಾದ ಸವಣೂರು ಮೂಲದ ಝಕೀರ್ ಮತ್ತು ಶಫೀಕ್ ಬೆಳ್ಳಾರೆಯನ್ನು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಸಬೇಕಾಗಿದೆ. ಆರೋಪಿಗಳನ್ನು ಹಿಂದೆ ನ್ಯಾಯಾಲಕ್ಕೆ ಹಾಜರು ಮಾಡುತ್ತೇವೆ ಎಂದು ದಕ್ಷಿಣಕನ್ನಡ ಎಸ್‍ಪಿ ಹೃಷಿಕೇಶ್ ಸೋನಾವಣೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಪೊಲೀಸರು ತನಿಖೆಗಾಗಿ ಮಗನನ್ನು ಕರೆದೊಯ್ದಿದ್ದು, 24 ಗಂಟೆ ಕಳೆದರೂ ಬಿಟ್ಟಿಲ್ಲ. ಅಲ್ಲದೆ, ಕೊಲೆ ಆರೋಪಿ ಎಂಬ ಪಟ್ಟ ಕಟ್ಟುತ್ತಿದ್ದಾರೆ. ಯಾವುದೇ ತಪ್ಪು ಮಾಡದವನ ಮೇಲೆ ಸುಖಾಸುಮ್ಮನೆ ಪ್ರಕರಣ ದಾಖಲಿಸಿ ಜೈಲಿಗಟ್ಟುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಶಫೀಕ್ ಬೆಳ್ಳಾರೆಯ ಮನೆಯವರು ಆರೋಪಿಸಿದ್ದಾರೆ.

- Advertisement -

ಮಾಧ್ಯಮದವರೊಂದಿಗೆ ಮಾತನಾಡಿದ ಶಫೀಕ್ ತಂದೆ ಇಬ್ರಾಹಿಂ, ಶಫೀಕ್ ಎಸ್‌ಡಿಪಿಐ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ. ಆದರೆ ಆತ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿಲ್ಲ. ಮನೆಯಲ್ಲಿ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಅದರಲ್ಲಿ ಭಾಗವಹಿಸಿ ಬಂದ ಆತನನ್ನು ರಾತ್ರಿ ವೇಳೆಗೆ ವಿಚಾರಣೆಗೆಂದು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಘಟನೆ ನಡೆದ ದಿನದಂದು ಆತ ಆಚೆ ಹೋಗಿದ್ದಾನೆ ಎಂದು ಈಗ ಹೇಳುತ್ತಿದ್ದು, ಅವನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಆಚೆ ಅವನು ಮಸೀದಿಗೆ ಹೋಗುತ್ತಿದ್ದ ಹೊರತು ಬೇರೆ ವಿಚಾರದಲ್ಲಿ ಅವನು ಭಾಗಿಯಾಗಿಲ್ಲ ಎಂದರು.

ಇದೇ ವೇಳೆ ಶಫೀಕ್ ಪತ್ನಿ ಅನ್ಶಿಪಾ ಮಾತನಾಡಿ, ಪತಿ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಆದರೆ ಯಾವುದೇ ಗಲಾಟೆಗಳಲ್ಲಿ ಭಾಗಿಯಾಗಿಲ್ಲ, ಅಲ್ಲದೆ, ಗಲಾಟೆಗಳಲ್ಲಿ ಭಾಗಿಯಾಗದಂತೆ ಬೇರೆಯವರಿಗೂ ತಿಳಿ ಹೇಳುತ್ತಿದ್ದರು. ಆದರೆ ಈಗ ಮಾಡದ ತಪ್ಪಿಗೆ ಅವರ ಮೇಲೆ ಪ್ರಕರಣ ದಾಖಲಿಸಿ ಆರೋಪಿ ಪಟ್ಟ ಕಟ್ಟುತ್ತಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.ಪ್ರವೀಣ್ ಹತ್ಯೆಯಾದ ದಿನ ಬೆಳಗ್ಗೆ ಸಿಕ್ಕಿದ್ದರು ಎಂಬುದಾಗಿ ವರೇ ಹೇಳಿದ್ದರು. ಆದರೆ ರಾತ್ರಿ ವೇಳೆಗೆ ಅವರು ಹತ್ಯೆಯಾಗಿರುವ ವಿಚಾರವನ್ನು ಮೊಬೈಲ್‌ನಲ್ಲಿ ನೋಡಿ ನೋವು ವ್ಯಕ್ತಪಡಿಸಿದ್ರು ಎಂದು ಪತ್ನಿ ಹೇಳಿದ್ದಾರೆ.

- Advertisement -
TAGGED: ,
Share this Article
Leave a comment
adbanner