ಮಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಯುವಮೋರ್ಚಾ ಘಟಕದ ಮುಖಂಡ ಪ್ರವೀಣ್ ನೆಟ್ಟಾರು ಅವರ ನಿವಾಸಕ್ಕೆ ಬಂದು, ಮಸೂದ್ ಮನೆಗೆ ಬಾರದೇ ಇದ್ದ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಅವರು ಆಕ್ರೋಶವನ್ನು ಹೊರ ಹಾಕಿದ್ದಾರೆ.
ಪುತ್ತೂರು ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಹತ್ಯೆಗೆ ಗುರಿಯಾಗಿದ್ದ ಯುವಕ ಮಸೂದ್ ಅವರ ಕಳಂಜದ ಮನೆಗೆ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಮೃತ ಮಸೂದ್ ಕುಟುಂಬಕ್ಕೆ ಜೆಡಿಎಸ್ ಪಕ್ಷದ ವತಿಯಿಂದ 5 ಲಕ್ಷ ರೂಪಾಯಿ ನೆರವಿನ ಚೆಕ್ ಹಸ್ತಾಂತರ ಮಾಡಿದ್ದಾರೆ.

ಆ ಬಳಿಕ ಸುರತ್ಕಲ್ ನಲ್ಲಿ ಹತ್ಯೆಯಾದ ಫಾಜಿಲ್ ನಿವಾಸಕ್ಕೂ ಕುಮಾರಸ್ವಾಮಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ರು. ಮಂಗಳೂರು ಸುರತ್ಕಲ್ ಬಳಿಯ ಮಂಗಳಪೇಟೆಯಲ್ಲಿರುವ ಫಾಜಿಲ್ ಮನೆಗೆ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಪಕ್ಷದ ಪ್ರಮುಖ ನಾಯಕರಾದ ಭೋಜೇ ಗೌಡ, ಸಿ.ಎಂ. ಇಬ್ರಾಹಿಂ ಮತ್ತು ಸ್ಥಳೀಯ ನಾಯಕರು ಭೇಟಿ ನೀಡಿದ್ದರು. ಈ ವೇಳೆ ಯಾವುದೇ ಅಹಿತಕರ ಘಟನೆಯಾಗದಂತೆ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.
ಇದೇ ವೇಳೆ ಸಿಎಂ ಬೊಮ್ಮಾಯಿ ಮಸೂದ್ ಮನೆಗೆ ಭೇಟಿ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಸರ್ಕಾರದ ಮುಖ್ಯಮಂತ್ರಿ ಈ ರೀತಿಯ ಧೋರಣೆ ಬೇಜವಾಬ್ದಾರಿ ಸರಿಯಲ್ಲ. ಮಸೂದ್ಗೆ ಯಾವುದೇ ರಾಜಕೀಯ, ಸಂಘಟನೆ ಸಂಬಂಧ ಇಲ್ಲ.
ಕುಟುಂಬಕ್ಕೆ ಬಂದು ಸಿಎಂ ಸಾಂತ್ವನ ಹೇಳುವ ಸೌಜನ್ಯ ತೋರಿಸಿಲ್ಲ. ಮಸೂದ್ ಕುಟುಂಬ ನನ್ನ ಗಮನಕ್ಕೆ ತಂದ ವಿಚಾರವನ್ನು ಪೊಲೀಸರ ಗಮನಕ್ಕೆ ತರುತ್ತೇನೆ. ತೀವ್ರ ಶೋಕದಲ್ಲಿರುವ ಕುಟುಂಬದವರು ಈ ನೋವಿನಿಂದ ಹೊರಬರಬೇಕು. ಪಕ್ಷದ ವತಿಯಿಂದ ಆ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲಾಗಿದೆ.
ಒಂದು ಕರುವನ್ನು ಹಿಂದೂ ಸಮಾಜದವರೇ ಸಾಕಾಲು ಏನು ನೀಡಿದ್ರು, ಅಲ್ಲಿಂದ ಹತ್ಯೆಗೆ ಸ್ಕೆಚ್ ಮಾಡಿಕೊಂಡರು ಎಂದು ತಿಳಿಸಿದ್ರು.