ಕಾಸರಗೋಡು: ಆನ್ ಲೈನ್ ಹೊಟೇಲ್ ಫುಡ್ ಸೇವಿಸಿ ವಿದ್ಯಾರ್ಥಿನಿ ಮೃತ್ಯು

ಕಾಸರಗೋಡು ಸಮೀಪದ ಪೆರುಂಬಳ ಎಂಬಲ್ಲಿನ ಅಂಜುಶ್ರೀ ಪಾರ್ವತಿ (20) ಮೃತಪಟ್ಟ ವಿದ್ಯಾರ್ಥಿನಿ.

News Desk
1 Min Read

ಕಾಸರಗೋಡು,  ಜ 07 : ವಿಷಾಹಾರ ಸೇವನೆಯಿಂದ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಪೆರುಂಬಳ ಬೇನೂರಿನಲ್ಲಿ ನಡೆದಿದೆ.

ಕಾಸರಗೋಡು ಸಮೀಪದ ಪೆರುಂಬಳ ಎಂಬಲ್ಲಿನ ಅಂಜುಶ್ರೀ ಪಾರ್ವತಿ (20) ಮೃತಪಟ್ಟ ವಿದ್ಯಾರ್ಥಿನಿ. ಅಂಜುಶ್ರೀ ಪಾರ್ವತಿ ಕಾಸರಗೋಡಿನ ರೊಮಾನ್ಸಿಯಾ ಎಂಬ ಹೊಟೇಲ್ ನಿಂದ ಡಿ.21ರಂದು ಆಹಾರ ತರಿಸಿ ಸೇವಿಸಿದ್ದರು. ನಂತರ ಅಸೌಖ್ಯಕ್ಕೀಡಾಗಿದ್ದ ಇವರನ್ನು ಕಾಸರಗೋಡಿನ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶನಿವಾರ ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಂಜುಶ್ರೀ ಪಾರ್ವತಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ  ಸರಕಾರಿ ಶಾಲೆಯ ಬಿ.ಕಾಂ ವಿದ್ಯಾರ್ಥಿನಿ.

ಹೊಸವರ್ಷದ ಹಿನ್ನಲೆಯಲ್ಲಿ ಹೋಟೆಲ್ ನಿಂದ ಆನ್ ಲೈನ್ ಮೂಲಕ ಆಹಾರ ಖರೀದಿಸಿ ಕುಟುಂಬದವರ ಜೊತೆ ಸೇವಿಸಿದ್ದು ಆಹಾರ ಸೇವಿಸಿದ್ದ ಎಲ್ಲರಲ್ಲಿ ಅಸ್ವಸ್ಥತೆ ಕಂಡುಬಂದಿತ್ತು . ಆದರೆ ಅಂಜುಶ್ರಿ ತೀವ್ರ ಅಸ್ವಸ್ಥತೆ ಗೊಂಡ ಹಿನ್ನಲೆಯಲ್ಲಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು . ಆದರೆ ಸ್ಥಿತಿ ಗಂಭೀರವಾದುರಿಂದ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಂದು ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗುವುದು . ,ಮೇಲ್ಪರಂಬ ಠಾಣಾ ಪೊಲೀಸರು ಅಸಹಜ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ . ಆಹಾರವನ್ನು ನಗರ ಹೊರವಲಯದ ಅಡ್ಕತ್ತಬೈಲ್ ನ ಹೋಟೆಲೊಂದರಿಂದ ಖರೀದಿಸಿದ್ದಳು .

- Advertisement -

ವರದಿ ಕೇಳಿದ ಆರೋಗ್ಯ ಸಚಿವೆ:

ವಿಷಹಾರ ಸೇವನೆ ಯಿಂದ ವಿದ್ಯಾರ್ಥಿನಿ ಮೃತಪಟ್ಟ ಹಿನ್ನಲೆಯಲ್ಲಿ ಸಮಗ್ರ ತನಿಖೆಗೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆದೇಶ ನೀಡಿದ್ದಾರೆ . ಈ ಕುರಿತು ತುರ್ತು ವರದಿ ನೀಡುವಂತೆ ಆಹಾರ ಸುರಕ್ಷಾ ಆಯುಕ್ತರಿಗೆ ಆದೇಶ ನೀಡಿದ್ದಾರೆ ಜಿಲ್ಲಾ ವೈದ್ಯಾಧಿಕಾರಿಯವರಿಂದ ಸಚಿವರು ವರದಿ ನೀಡುವಂತೆ ಆದೇಶಿದ್ದಾರೆ.

- Advertisement -
TAGGED: ,
Share this Article
Leave a comment
adbanner