ಮಡಿಕೇರಿ: ಮೀನು ಹಿಡಿಯಲು ತೆರಳಿದ್ದ ಬಾಲಕರು ಕಾವೇರಿ ನದಿಯ ಮುಳುಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ.
ಪೃಥ್ವಿ (7), ಪ್ರಜ್ವಲ್ (4) ಮೃತ ಬಾಲಕರು. ಮೃತ ದುರ್ವೈವಿಗಳು. ಇಂದು ಬೆಳಗ್ಗೆ ಕೂಡ್ಲುರು ಗ್ರಾಮದ ಬಳಿ ಮಾವಿನತೋಪು ಸಮೀಪ ಕಾವೇರಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದರು. ಈ ಸಂದರ್ಭ ಆಕಸ್ಮಿಕವಾಗಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಕೂಡ್ಲುರು ನಿವಾಸಿ ಕೂಲಿ ಕಾರ್ಮಿಕ ನಾಗರಾಜ್ ಎಂಬವರ ಪುತ್ರ ಪೃಥ್ವಿ, ಆಟೋ ಚಾಲಕ ಸತೀಶ್ ಎಂಬವರ ಪುತ್ರ ಪ್ರಜ್ವಲ್ ಇಬ್ಬರು ಸಂಬಂಧದಲ್ಲಿ ಸಹೋದರರಾಗಿದ್ದರು.
ಮನೆಯ ಸಮೀಪ ಜಮೀನಿಗೆ ಹೊಂದಿಕೊಂಡಂತೆ ಇದ್ದ ಕಾವೇರಿ ನದಿಯಲ್ಲಿ ಭಾನುವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಕುಶಾಲನಗರ ಪೊಲೀಸರು ಭೇಟಿ ನೀಡಿ ಕಾವೇರಿಯಲ್ಲಿ ಮುಳುಗಿದ್ದ ಮೃತ ಬಾಲಕರ ದೇಹವನ್ನು ನದಿ ಹೊರತೆಗೆದಿದ್ದಾರೆ. ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಮೃತ ದೇಹಗಳನ್ನು ರವಾನೆ ಮಾಡಲಾಗಿದೆ. ಘಟನೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ