ಮಂಗಳೂರು: ಸುರತ್ಕಲ್ ಸಮೀಪ ಯುವಕನಿಗೆ ತಲ್ವಾರು ದಾಳಿ; ಗಂಭೀರ ಸ್ಥಿತಿಯಲ್ಲಿದ್ದ ಯುವಕ ಮೃತ್ಯು

News Desk
0 Min Read

ಮಂಗಳೂರು: ಬೆಳ್ಳಾರೆಯಲ್ಲಿ ಪ್ರವೀಣ್ ಕೊಲೆಯ ಬೆನ್ನಲ್ಲೇ ಮಂಗಳೂರಿನ ಸುರತ್ಕಲ್ ಸಮೀಪ ಕೊಲೆ ಯತ್ನ ನಡೆದಿದೆ. ಅಂಗಡಿಗೆ ನುಗ್ಗಿ ಯುವಕನಿಗೆ ಹಿಗ್ಗಾಮುಗ್ಗಾ ದಾಳಿ ನಡೆಸಿದ್ದು, ಗಾಯಾಳು ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕ ಮೃತ ಪಟ್ಟಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಂಗಳ ಪೇಟೆಯ ಫಾಝಿಲ್ ಆಸಿಲ್ ಮೃತ ಯುವಕ

ಚಪ್ಪಲಿ ಖರೀದಿಗೆ ಬಂದಿದ್ದ ಯುವಕನ ಮೇಲೆ ಅಂಗಡಿಯ ಎದುರಿನ ಜಗಲಿಯಲ್ಲೇ ತಲವಾರಿನಿಂದ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದರು ಸಾಧ್ಯವಾಗಲಿಲ್ಲ.

ಭಾರೀ ಪ್ರಮಾಣದಲ್ಲಿ ರಕ್ತ ಸ್ರಾವ ವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಫಾಝಿಲ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದಾಗಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

- Advertisement -

- Advertisement -
TAGGED: ,
Share this Article
Leave a comment
adbanner