ಮಂಗಳೂರು: ಫಾಜಿಲ್ ಹತ್ಯೆ ಪ್ರಕರಣದ ತನಿಖೆ ಬ್ರೇಕ್ ಥ್ರೂ ಹಂತಕ್ಕೆ ಬಂದಿದೆ ಎಂದು ಹೇಳಬಹುದು. ಕಳೆದ ಎರಡು ದಿನಗಳಿಂದ ನಮಗೆ ನಿರ್ದಿಷ್ಟ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಈಗ ಕೃತ್ಯಕ್ಕೆ ಬಳಕೆ ಮಾಡಿರೋ ವಾಹನ ಗೊತ್ತಾಗಿದೆ. ಆದರ ಮಾಲೀಕರನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.


ಪ್ರಕರಣದ ಬಗ್ಗೆ ವಿವರಣೆ ನೀಡಿದ ಶಶಿಕುಮಾರ್ ಅವರು, ಮಂಗಳೂರು ನಗರ ಕಮಿಷನರೇಟ್ನಲ್ಲಿ 28ರಂದು ಫಾಸಿಲ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆಯಾಗುತ್ತೆ. ಆಸ್ಪತ್ರೆಯಲ್ಲಿ ಆತ ಮೃತ ಪಟ್ಟಿದ್ದಾನೆ ಅನ್ನೋದು ದೃಢ ಪಡಿಸುತ್ತಾರೆ. ನಮ್ಮ ತನಿಖಾ ತಂಡ ತನಿಖೆಯನ್ನ ಮಾಡ್ತಿದ್ದಾರೆ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದವರು ಹಾಗೂ ಕೊಲೆಗೆ ಸಂಬಂಧಿಸಿದವರ ಪರಿಚಿತರನ್ನು ವಿಚಾರಣೆ ನಡೆಸಲಾಗಿದೆ. ಹಂತ ಹಂತವಾಗಿ 14, 16, 21 ಜನರನ್ನ.. ಸದ್ಯ ಒಟ್ಟು 51 ಜನರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದೇವೆ.
ನಿನ್ನೆ ಸಂಜೆಯಿಂದ ಬಿಳಿ ಬಣ್ಣದ ಇಯಾನ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಒಟ್ಟು ಎಂಟು ಕಾರುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ.
ಪೊಲೀಸ್ ಆಯುಕ್ತ ಶಶಿಕುಮಾರ್
ಕಾರು ಓನರ್ ಬಗ್ಗೆ ಮಾಹಿತಿ ಪತ್ತೆ ಮಾಡಲು ಮುಂದಾಗಿದ್ದೇವು. ಈ ವೇಳೆ ಮಾಲೀಕನ ಮಾಹಿತಿ ಪಡೆಯುತ್ತೇವೆ. ಕಾರು ಓನರ್ನನ್ನು ಸೂರತ್ಕಲ್ ಹೊರ ವಲಯದಲ್ಲಿ ವಶಕ್ಕೆ ಪಡೆದುಕೊಂಡಿದ್ದೇವೆ. ಕೆಲವು ಮಾಹಿತಿ ನೀಡಿದ್ದಾನೆ ಈತ ಮತ್ತೊಬ್ಬನಿಗೆ ವಾಹನ ನೀಡಿದ್ದಾನೆ ಅನ್ನೋ ಮಾಹಿತಿಯಿದೆ. ಎಷ್ಟು ಹಣ ಕೊಟ್ಟಿದ್ದಾರೆ..? ಯಾರು ತಗೊಂಡು ಹೋಗಿದ್ದಾರೆ..? ಅನ್ನೋ ಮಾಹಿತಿ ಕಲೆ ಹಾಕಲಾಗಿದೆ. ಆರೋಪಿಗಳಲ್ಲಿ ಓರ್ವ ಆರೋಪಿ ಈತನ ಜೊತೆ ನೇರ ಸಂಪರ್ಕದಲ್ಲಿದ್ದಾನೆ. ಈತ ಹೆಚ್ಚು ಹಣಕ್ಕೆ ಬಾಡಿಗೆಗೆ ಕೊಟ್ಟಿದ್ದಾನೆ ಅನ್ನೋ ಮಾಹಿತಿ ಇದೆ. ಈ ಪ್ರಕರಣದಲ್ಲಿ ಈತ ಇಷ್ಟ ಬಂದಂತೆ ಮಾತನಾಡುತ್ತಿದ್ದಾನೆ. ವಿಚಾರಣೆ ನಡೆಸಿದ ನಂತರ ಕಂಪ್ಲೀಟ್ ಮಾಹಿತಿ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.