ಮಂಗಳೂರು: ಇಲ್ಲಿನ ಪೊಲೀಸರು ಟ್ರಾಫಿಕ್ ಬ್ಲಾಕ್ ತೆರವುಗೊಳಿಸಲು ತಣ್ಣೀರಭಾವಿ ಬೀಚ್ನಲ್ಲಿ ಯುವಕರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಪೊಲೀಸರ ದೌರ್ಜನ್ಯದ ವೇಳೆ 6 ನೇ ತರಗತಿಯ ವಿದ್ಯಾರ್ಥಿ ಮತ್ತು ಪಿಯು ವಿದ್ಯಾರ್ಥಿಗಳು ಕೂಡ ಹೊಡೆತಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯರು ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸ್ಥಳೀಯರ ಪ್ರಕಾರ, ವಾರಾಂತ್ಯ ಮತ್ತು ಹೊಸ ವರ್ಷವಾದ್ದರಿಂದ ತಣ್ಣೀರಭಾವಿ ಬೀಚ್ಗೆ ಭಾನುವಾರ ಹೆಚ್ಚಿನ ಸಂದರ್ಶಕರ ನೂಕುನುಗ್ಗಲು ಇತ್ತು. ಹೀಗಾಗಿ ಶನಿವಾರದಿಂದಲೇ ಬೀಚ್ಗೆ ತೆರಳುವ ರಸ್ತೆಯನ್ನು ನಿರ್ಬಂಧಿಸಲಾಗಿತ್ತು.

ಟ್ರಾಫಿಕ್ ಜಾಮ್ಗೆ ಕಾರಣ ಎಂದು ಆರೋಪಿಸಿ ಕ್ರಿಕೆಟ್ ಆಡಿ ವಾಪಸ್ ಬರುತ್ತಿದ್ದ ಯುವಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
6ನೇ ತರಗತಿ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಪೊಲೀಸರಿಗೆ ಘೇರಾವ್ ಹಾಕಿದರು ಮತ್ತು ಮೂವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
- Advertisement -
ತಣ್ಣೀರಭಾವಿ ಬೀಚ್ನಲ್ಲಿ 6ನೇ ತರಗತಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿರುವ ಆರೋಪದ ಮೇಲೆ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.
ಘಟನೆಯನ್ನು ಪೊಲೀಸ್ ಆಯುಕ್ತರ ಗಮನಕ್ಕೆ ತರಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಅವರಿಂದ ವರದಿ ಕೇಳಿದ್ದಾರೆ.