ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ಕಚೇರಿಯಲ್ಲಿ ಸಾವರ್ಕರ್ ಪೋಟೋ ಆಳಡಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಪಾಲಿಕೆಯ ಸುರತ್ಕಲ್ನ ಹೊಸ ವಲಯ ಕಚೇರಿ ನಿನ್ನೆ ಉದ್ಘಾಟನೆಗೊಂಡಿತ್ತು. ಅದರಲ್ಲಿರುವ ಮಂಗಳೂರು ಉತ್ತರ ಶಾಸಕ ವೈ ಭರತ್ ಶೆಟ್ಟಿ ತನ್ನ ಶಾಸಕ ಕಛೇರಿಯಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಿ ಉದ್ಘಾಟನೆ ವೇಳೆ ಅದಕ್ಕೆ ಪುಷ್ಪಾರ್ಚನೆಗೈದು ಗೌರವ ಸೂಚಿಸಿದ್ದಾರೆ.

ಮಂಗಳೂರು ಹೊರವಲಯ ಸುರತ್ಕಲ್ ಜಂಕ್ಷನ್ಗೆ ಕಾನೂನು ಪ್ರಕಾರ ಸಾವರ್ಕರ್ ಹೆಸರಿಡಲು ಸಿದ್ಧತೆ ನಡೆಯಲಾಗ್ತಿದೆ ಎಂದು ಮೂಲಗಳು ತಿಳಿಸಿವೆ. ಶಾಸಕ ಭರತ್ ಶೆಟ್ಟಿ ಕಳೆದ ವರ್ಷವೇ ಪಾಲಿಕೆಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ಆ ಬಳಿಕ ಕೌನ್ಸಿಲ್ ಸಭೆಯಲ್ಲಿ ವಿರೋಧದ ಮಧ್ಯೆಯೇ ಪ್ರಸ್ತಾವನೆ ಪಾಸ್ ಆಗಿದೆ.
ಇದೀಗ ಮಂಗಳೂರಿನ ಬಿಜೆಪಿ ಶಾಸಕರ ನೇತೃತ್ವದಲ್ಲಿ ಸದ್ದಿಲ್ಲದೇ ಸಿದ್ದತೆ ನಡೆಯುತ್ತಿದ್ದು, ಕಾನೂನು ಪ್ರಕಾರವೇ ಜಂಕ್ಷನ್ ಗೆ ಸಾವರ್ಕರ್ ಹೆಸರಿಡೋ ತಯಾರಿ ಅಂತಿಮ ಹಂತದಲ್ಲಿದೆ.
- Advertisement -
ಕೆಲವೇ ದಿನಗಳಲ್ಲಿ ಪಾಲಿಕೆ ಮೂಲಕ ಸರ್ಕಾರದ ಅನುಮತಿಗೆ ರವಾನೆಯಾಗಲಿದೆ. ಅನುಮತಿ ಸಿಕ್ಕ ತಕ್ಷಣ ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ ನಾಮಕರಣ ಮಾಡಲು ಪ್ಲಾನ್ ಮಾಡಲಾಗಿದ್ದು, ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ.