ಉಡುಪಿ: ಫಾಝಿಲ್ ಹತ್ಯೆಗೆ ಬಳಸಿದ ಕಾರಿನಲ್ಲಿ ಮೈಕ್ರೋ ಸಿಮ್ ಪತ್ತೆ

ಇಯೋನ್ ಕಾರಿನ ಹಿಂಬದಿಯ ಸೀಟಿನಲ್ಲಿತ್ತು ರಕ್ತದ ಕಲೆಗಳು, ನೀರಿನ ಬಾಟಲ್ ಮತ್ತು ಹಣ ಪತ್ತೆಯಾಗಿದ್ದು, ಸದ್ಯ ಸಾಕ್ಷಿ ನಾಶವಾಗದಂತೆ ಕಾರಿಗೆ ಪ್ಲಾಸ್ಟಿಕ್ ಶೀಟ್ ಹೊದಿಕೆ ಮಾಡಲಾಗಿದೆ.

News Desk
1 Min Read

ಉಡುಪಿ, ಜು 31: ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದ ಫಾಝಿಲ್ ಹತ್ಯೆಗೆ ಬಳಸಿದ ಬಿಳಿ ಬಣ್ಣದ ಇಯಾನ್ ಕಾರು ಪಡುಬಿದ್ರೆಯ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿದ್ದು, ಕಾರಿನಲ್ಲಿ ಮೈಕ್ರೋ ಸಿಮ್ ಪತ್ತೆಯಾಗಿದೆ.

ಇಯೋನ್ ಕಾರಿನ ಹಿಂಬದಿಯ ಸೀಟಿನಲ್ಲಿತ್ತು ರಕ್ತದ ಕಲೆಗಳು, ನೀರಿನ ಬಾಟಲ್ ಮತ್ತು ಹಣ ಪತ್ತೆಯಾಗಿದ್ದು, ಸದ್ಯ ಸಾಕ್ಷಿ ನಾಶವಾಗದಂತೆ ಕಾರಿಗೆ ಪ್ಲಾಸ್ಟಿಕ್ ಶೀಟ್ ಹೊದಿಕೆ ಮಾಡಲಾಗಿದೆ.

ಇನ್ನು ಈಗಾಗಲೇ ಸ್ಥಳಕ್ಕೆ ಬಂದ ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ಹಾಗೂ ಪಡುಬಿದ್ರಿ ಎಸೈ ಪುರುಪೋತ್ತಮ ಪರಿಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞರು ಆಗಮಿಸುವ ಹಿನ್ನಲೆಯಲ್ಲಿ ಸಾರ್ವಜನಿಕರು ಸ್ಪರ್ಶಿಸಬಾರದು ಎಂಬ ನಿಟ್ಟಿನಲ್ಲಿ ಪ್ಲಾಸ್ಟಿಕ್ ಹೊದಿಗೆ ಹಾಕಿದ್ದು, ಡುಬಿದ್ರೆ ಪೊಲೀಸರು ಮಂಗಳೂರು ಎಫ್ಎಸ್ಎಲ್ ತಂಡ ಬರುವುದಕ್ಕಾಗಿ ಕಾಯುತ್ತಿದ್ದಾರೆ.

- Advertisement -
TAGGED: ,
Share this Article
Leave a comment
adbanner