ಮಂಗಳೂರು: ಮುಂಬೈ ಪೊಲೀಸರಿಗೆ 26/11 ಮಾದರಿಯ ದಾಳಿ ಬೆದರಿಕೆ – ಕರಾವಳಿ ಜಿಲ್ಲೆಗಳಿಗೆ ಎಚ್ಚರಿಕೆ

ನವೆಂಬರ್ 26, 2008 ರಂದು ಮುಂಬೈ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ಸಮುದ್ರ ಮಾರ್ಗವನ್ನು ಬಳಸಿದ್ದರು.

News Desk
1 Min Read

ಮಂಗಳೂರು, ಆ 21: ಮುಂಬೈನಲ್ಲಿ 26/11ರ ದಾಳಿಯಂತೆಯೇ ಮತ್ತೊಂದು ದಾಳಿ ನಡೆಸಲಾಗುವುದು ಎಂದು ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಪಾಕಿಸ್ತಾನ ಮೂಲದ ದೂರವಾಣಿ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ನವೆಂಬರ್ 26, 2008 ರಂದು ಮುಂಬೈ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ಸಮುದ್ರ ಮಾರ್ಗವನ್ನು ಬಳಸಿದ್ದರು.

ಅದಕ್ಕಾಗಿಯೇ ಅರಬ್ಬಿ ಸಮುದ್ರದ ಕರಾವಳಿಯಲ್ಲಿ ವಿಶೇಷ ನಿಗಾ ಇರಿಸಲಾಗಿದೆ.ಮುಂಬೈ ಪೊಲೀಸರಿಗೆ ಬೆದರಿಕೆ ಕರೆ ಬಂದ ನಂತರ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ ಎಂದು ಕರಾವಳಿ ಕಾವಲು ವಿಭಾಗದ ಎಸ್ಪಿ ಅಬ್ದುಲ್ ಅಹ್ಮದ್ ತಿಳಿಸಿದ್ದಾರೆ.

- Advertisement -
TAGGED:
Share this Article
Leave a comment
adbanner