ನೆರೆಹೊರೆಯ 12 ವರ್ಷದ ಬಾಲಕನೊಂದಿಗೆ ಮಾತಾಡಿದ್ದಕ್ಕೆ 11 ವರ್ಷದ ಮಗಳನ್ನು ಕಾಲುವೆಗೆ ಎಸೆದು ಕೊಂದ ಪೋಷಕರು

ತಮ್ಮ 11 ವರ್ಷದ ಮಗಳನ್ನು ನೆರೆಹೊರೆಯ 12 ವರ್ಷದ ಬಾಲಕನೊಂದಿಗೆ ಮಾತನಾಡಿದ್ದಕ್ಕಾಗಿ ದಂಪತಿಗಳು ಕಾಲುವೆಗೆ ಎಸೆದು ಕೊಂದಿರುವ ಘಟನೆ ಮೀರತ್‌ನಲ್ಲಿ ನಡೆದಿದೆ

News Desk
2 Min Read

ಮೀರತ್‌ (ಸೆ. 05):  4ನೇ ತರಗತಿಯಲ್ಲಿ ಓದುತ್ತಿರುವ ತಮ್ಮ 11 ವರ್ಷದ ಮಗಳನ್ನು ನೆರೆಹೊರೆಯ 12 ವರ್ಷದ ಬಾಲಕನೊಂದಿಗೆ ಮಾತನಾಡಿದ್ದಕ್ಕಾಗಿ ದಂಪತಿಗಳು ಕಾಲುವೆಗೆ ಎಸೆದು ಕೊಂದಿರುವ ಘಟನೆ ಮೀರತ್‌ನಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.  ಘಟನೆ ಸೆಪ್ಟೆಂಬರ್ 1 ರಂದು ನಡೆದಿದೆ. ಅಪ್ರಾಪ್ತ ಬಾಲಕಿಯ ಶವವನ್ನು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಶನಿವಾರ ರಾತ್ರಿ ಪೋಷಕರನ್ನು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ತಮ್ಮ ಮಗಳು ಚಂಚಲ್ ನಾಪತ್ತೆಯಾಗಿದ್ದಾಳೆ ಎಂದು ಪೋಷಕರಾದ ಬಬ್ಲೂ ಕಶ್ಯಪ್ (40) ಮತ್ತು ರೂಬಿ ಕಶ್ಯಪ್ (38) ಈ ಹಿಂದೆ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದು  ಬಾಲಕಿಯ ಆರು ವರ್ಷದ ಸಹೋದರ ಆರವ್ ಕಶ್ಯಪ್‌ನೊಂದಿಗೆ ಮಾತನಾಡಿದಾಗ ಪೋಲಿಸರಿಗೆ ಮಾಹಿತಿ ನೀಡಿದ್ದಾನೆ.  ಆತನ ಪೋಷಕರು ಚಂಚಲ್‌ನನ್ನು ಹತ್ತಿರದ ಮಾರುಕಟ್ಟೆಗೆ ಕರೆದೊಯ್ದರು ಆದರೆ “ಅವರು ಹಿಂದಿರುಗಿದಾಗ, ಅವಳು ಅವರೊಂದಿಗೆ ಇರಲಿಲ್ಲ” ಎಂದು ಸಹೋದರ್‌ ಮಾಹಿತಿ ನೀಡಿದ್ದಾನೆ. 

ನಂತರ ಪೊಲೀಸರು ದಂಪತಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಅಪರಾಧ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ನಗರದ ಸರ್ಧಾನ ಪ್ರದೇಶದ ಭೋಲೆ ಕಿ ಝಾಲ್ ಬಳಿಯ ಕಾಲುವೆಯಲ್ಲಿ ತಮ್ಮ ಅಪ್ರಾಪ್ತ ಮಗಳನ್ನು ಮುಳುಗಿಸಿ ಕೊಂದಿದ್ದಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ.

“ಬಾಲಕಿಯ ಪತ್ತೆಗಾಗಿ ಕಾಲುವೆ ಬಳಿ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ಬಾಲಕಿಯ ಶವ ಇನ್ನೂ ಪತ್ತೆಯಾಗಿಲ್ಲ” ಎಂದು ಎಸ್‌ಪಿ (ಗ್ರಾಮೀಣ) ಕೇಶವ್‌ಕುಮಾರ್ ಮಾಹಿತಿ ನೀಡಿದ್ದಾರೆ. 

- Advertisement -

“ರಿಕವರಿ ಏಜೆಂಟ್ ಆಗಿರುವ ಬಬ್ಲೂ ಅವರು ಸೆಪ್ಟೆಂಬರ್ 1 ರಂದು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಮತ್ತು ಅವರ ಪತ್ನಿ ತಮ್ಮ ಮಗಳಿಗೆ ಬರ್ಗರ್ ಖರೀದಿಸಲು ಸ್ಥಳೀಯ ಮಾರುಕಟ್ಟೆಗೆ ಕರೆದೊಯ್ದಿದ್ದಾರೆ. ಆದರೆ, ಅವರ ಮಗಳು ಅಲ್ಲಿಂದ ನಾಪತ್ತೆಯಾಗಿದ್ದಾಳೆ ಎಂದು ಅವರು ತಿಳಿಸಿದ್ದರು” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

”ದೂರು ಸ್ವೀಕರಿಸಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರು ಹತ್ತಿರದ ಅಂಗಡಿಗಳಿಂದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ, ಆದರೆ ಬಾಲಕಿ ಪತ್ತೆಯಾಗಿರಲಿಲ್ಲ, ” ಎಂದು ಪೊಲೀಸರು ತಿಳಿಸಿದ್ದಾರೆ.  ವಿಚಾರಣೆ ವೇಳೆ ಬಬ್ಲೂ ಮತ್ತು ಅವರ ಪತ್ನಿ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ ಎಂದು ಪೋಲಿಸರು ಹೇಳಿದ್ದಾರೆ. ಆದರೆ ಅವರ ಮಗ ಆರವ್ ಜೊತೆ ಮಾತನಾಡಿದಾಗ ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿದೆ. 

“ಪ್ರಕರಣಕ್ಕೆ ಐಪಿಸಿಯ ಸೆಕ್ಷನ್ 302 (ಕೊಲೆ) ಸೇರಿಸಲಾಗಿದೆ. ವಿಚಾರಣೆ ವೇಳೆ ಬಬ್ಲೂ ತನ್ನ ಮಗಳು ಹುಡುಗನೊಂದಿಗೆ ಆಟವಾಡುವುದನ್ನು ಇಷ್ಟಪಡುತ್ತಿರಲಿಲ್ಲ ಎಂದು ಒಪ್ಪಿಕೊಂಡಿದ್ದಾನೆ. ಬಬ್ಲೂ ಜೈಲಿಗೆ ಕಳುಹಿಸಲಾಗಿದ್ದು, ಆದರೆ  ಅನಾರೋಗ್ಯಕ್ಕೆ ತುತ್ತಾದ  ಆರೋಪಿ ರೂಬಿಗೆ ಆಸ್ಪತ್ರೆಗೆ ಸಾಗಿಸಲಾಯಿತು, ”ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

- Advertisement -
TAGGED:
Share this Article
Leave a comment
adbanner