ಶಿವಮೊಗ್ಗ: ಫೇಸ್ ಬುಕ್ ಸ್ಟೇಟಸ್ ನಲ್ಲಿ ಸಾವರ್ಕರ್ ಗೆ ಅಪಮಾನ ಮಾಡಲಾದ ಪೋಸ್ಟ್ ಹಾಕಿಕೊಂಡಿದ್ದಕ್ಕೆ ಎಸ್ ಡಿಪಿಐ ಕಾರ್ಯಕರ್ತನನ್ನ ಬಂಧಿಸಿರುವ ಪೊಲೀಸರು ತಮ್ಮ ಸಮ್ಮುಖದಲ್ಲೇ ಕೋಮುದ್ವೇಷದ ಭಾಷಣ ಮಾಡಿದವರನ್ನ ಬಂಧಿಸಿಲ್ಲವೇಕೆ ಎಂದು ಎಸ್ ಡಿ ಪಿಐ ಆಗ್ರಹಿಸಿದೆ.

ಫೇಸ್ ಬುಕ್ ನಲ್ಲಿ ರಾಗಿಗುಡ್ಡದ ಎಸ್ ಡಿಪಿಐ ಕಾರ್ಯಕರ್ತನನ್ನ ಬಂಧಿಸಿದ ಪೊಲೀಸರು, ನಿನ್ನೆ ದೊಡ್ಡಪೇಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಮು ಸೌಹಾರ್ಧಕ್ಕೆ ಧಕ್ಕೆ ತರುವ ಕಾರ್ಯಕ್ರಮ ನಡೆದರೂ ಕಣ್ಣು ಮುಚ್ಚಿ ಕುಳಿತಿರುವುದು ಏಕೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಇಮ್ರಾನ್ ಪ್ರಶ್ನಿಸಿದ್ದಾರೆ.
ಆದರೆ ಯಾವ ಕಾರ್ಯಕ್ರಮ ಎಂದು ಅವರು ಉಲ್ಲೇಖಿಸಿಲ್ಲ. ಶಾಂತಿ ಸೌಹಾರ್ದವನ್ನ ಸಾರಲು ಅವಕಾಶ ಮಾಡಿಕೊಟ್ಟ ಜಿಲ್ಲಾಡಳಿತ ಕೋಮು ಸೌಹಾರ್ದ ಹಾಳು ಮಾಡುವ ಭಾಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾದರೂ ಹೇಗೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.