ಎಸ್’ಡಿಪಿಐ ಮುಖಂಡ ಶಾಫಿ ಬೆಳ್ಳಾರೆಗೆ ಟಿಕೆಟ್: ವಿರೋಧ ವ್ಯಕ್ತಪಡಿಸಿದ ಬಿಜೆಪಿ ವಿರುದ್ಧ SDPI ಕಿಡಿ

ಮಾಲೆಗಾಂನಲ್ಲಿ ಬಾಂಬ್ ಸ್ಫೋಟಿಸಿ 40 ಜನರ ಜೀವ ತೆಗೆದು, 125ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಆರೋಪಿ ಪ್ರಜ್ಞಾ ಸಿಂಗ್ ನಂತಹವರಿಗೆ ಟಿಕೆಟ್ ಕೊಟ್ಟ ಬಿಜೆಪಿ, ರಾಜಕೀಯ ದ್ವೇಷಕ್ಕೆ ಸುಳ್ಳು ಪ್ರಕರಣದಲ್ಲಿ ಬಂಧಿಸಲ್ಪಟ್ಟವರಿಗೆ ಟಿಕೆಟ್ ನೀಡಿರುವುದನ್ನು ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ತಿರುಗೇಟು ನೀಡಿದ್ದಾರೆ.

News Desk
1 Min Read

ಮಂಗಳೂರು: ಎಸ್’ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಅವರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲು ತೀರ್ಮಾನಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ವಿರುದ್ಧ ಎಸ್’ಡಿಪಿಐ ಕಿಡಿಕಾರಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಎಸ್’ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಪ್ರಜ್ಞ್ಯಾಸಿಂಗ್ ಎಂಬ ಭಯೋತ್ಪಾದಕಿಗೆ, ಹಲವು ರೇಪಿಸ್ಟ್’ಗಳಿಗೆ, ಗುಜರಾತ್’ನಲ್ಲಿ ವಂಶಹತ್ಯೆ ನಡೆಸಿದವರಿಗೆ, ನಕಲಿ ಎನ್’ಕೌಂಟರ್’ನಲ್ಲಿ ಗಡಿಪಾರಾದವರಿಗೆ ಟಿಕೆಟ್ ನೀಡಿದ @BJP4India, @BJP4Karnataka ನಿಮ್ಮ ದ್ವೇಷ ರಾಜಕೀಯಕ್ಕೆ ಬಲಿಯಾಗಿ ಬಂಧನದಲ್ಲಿರುವ ಶಾಫಿ ಬೆಳ್ಳಾರೆಗೆ SDPI ಟಿಕೆಟ್ ನೀಡುವಾಗ BJPಗೆ ಉರಿ ಶುರುವಾಗಿರುವುದು ಹಾಸ್ಯಾಸ್ಪದ ಎಂದು ತಿರುಗೇಟು ನೀಡಿದ್ದಾರೆ.

ಮಾಲೆಗಾಂನಲ್ಲಿ ಬಾಂಬ್ ಸ್ಫೋಟಿಸಿ 40 ಜನರ ಜೀವ ತೆಗೆದು, 125ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಆರೋಪಿ ಪ್ರಜ್ಞಾ ಸಿಂಗ್ ನಂತಹವರಿಗೆ ಟಿಕೆಟ್ ಕೊಟ್ಟ ಬಿಜೆಪಿ, ರಾಜಕೀಯ ದ್ವೇಷಕ್ಕೆ ಸುಳ್ಳು ಪ್ರಕರಣದಲ್ಲಿ ಬಂಧಿಸಲ್ಪಟ್ಟವರಿಗೆ ಟಿಕೆಟ್ ನೀಡಿರುವುದನ್ನು ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ತಿರುಗೇಟು ನೀಡಿದ್ದಾರೆ.

ಕರಾಳ ಇತಿಹಾಸ ಇರುವ ಬಿಜೆಪಿಯ 83 ಎಂ.ಪಿ, ಎಂ.ಎಲ್.ಎ ಗಳ ಮೇಲೆ ಕೊಲೆ, ಅತ್ಯಾಚಾರ  ಕ್ರಿಮಿನಲ್ ಪ್ರಕರಣಗಳಿವೆ. ಅಂತಹ ನಾಲ್ಕು ಜನರನ್ನು ಮಂತ್ರಿ ಕೂಡ ಮಾಡಿದ್ದಾರೆ. ರಾಜಕೀಯ ದ್ವೇಷಕ್ಕೆ ಬಂಧಿತ ಶಾಫಿ ಬೆಳ್ಳಾರೆಗೆ ಎಸ್’ಡಿಪಿಐ ಟಿಕೆಟ್ ಕೊಟ್ಟದ್ದನ್ನು ಅವರು ಪ್ರಶ್ನೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಎಸ್’ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.

- Advertisement -
TAGGED:
Share this Article
Leave a comment