ಶಿವಮೊಗ್ಗ: ಸೀಗೆಹಟ್ಟಿಯಲ್ಲಿ ಚೈತನ್ಯ ತುಂಗ ಅಗ್ನಿ ಯುವಕ ಸಂಘದ ವತಿಯಿಂದ ಹಮ್ಮಿಕೊಳ್ಖಲಾದ 24 ನೇ ವರ್ಷದ ಅದ್ದೂರಿ ಗಣೇಶೋತ್ಸವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರ್ಷ ಬದುಕಿರುವಷ್ಟು ಚಲಾಯಿಸಿಕೊಂಡಿದ್ದ ಬೈಕ್ ನ್ನ ಪ್ರದರ್ಶಿಸಲಾಯಿತು.

ಬಜಾಜ್ ಪ್ಲಾಟೀನಾ ಬೈಕ್ ಮುಂಭಾಗಕ್ಕೆ ಹರ್ಷನ ಫೋಟೋ ಹಾಕಿ ಅದಕ್ಕೆ ಹೂವಿನ ಹಾರಹಾಕಿ ವೇದಿಕೆ ಮೇಲೆ ಪ್ರದರ್ಶಿಸಲಾಯಿತು. ಹರ್ಷನ ಬೈಕ್ ಈಗ ಆಂಟಿಕ್ ಪೀಸ್ ಆಗಿ ಹೊರಹೊಮ್ಮಿದೆ.
ಈ ಬೈಕ್ ಬಗ್ಗೆ ಹಿಂದೂ ಕಾರ್ಯಕರ್ತೆ ತಮ್ಮ ಭಾಷಣದಲ್ಲೂ ಉಲ್ಲೇಖಿಸಿದ್ದಾರೆ. ಧರ್ಮ ದೇಶ ಎನ್ನುವರಿಗೆ ಇಂತಹ ಸಂಕಟಗಳು ಹೊಸದಲ್ಲ. ಯಾವ ಮಗ ಭಾರತ ಮಾತಾಕಿ ಜೈ ಎನ್ನುತ್ತಲೇ ಕೊಲೆ ಆಗುತ್ತಾನೆ. ಆತನನ್ನ ಹೊತುಹೆತ್ತ ತಾಯಿಗೆ ಸಂಕಟ ಆಗುವುದು ಸಹಜ.
ನಾವು ನಮ್ಮ ಮನೆಯ ಮಕ್ಕಳಿಗೆ ಬೈಕ್ ಕೊಡಿಸಲು ಹಿಂದು ಮುಂದೆ ನೋಡುತ್ತೇವೆ. ಆದರೆ ಹರ್ಷನ ಬೈಕ್ ನ್ನ ಧರ್ಮ ರಥವನ್ನಾಗಿಸಬೇಕು. ಹಿಂದೂಗಳಿಗೆ ಭಾರತ ಮಾತೆ ರತ್ನಗರ್ಭಧಾರಣಿಯಾಗಿ ಕಂಗೊಳಿಸುತ್ತಾಳೆ ವಿನಃ ಬಂಜೆ ಅಲ್ಲ. ಅದಕ್ಕೆ ಶಿವಾಜಿ ಉದಾಹರಣೆ, ಅದು ಈ ಮಣ್ಣಿಗೆ ಇರುವ ತಾಕತ್ತು. ಜಿಹಾದಿಗಳು ಈ ತಾಕತ್ತನ್ನ ಅರಿತುಕೊಳ್ಳಲಿ ಎಂದರು.