ಯುಪಿ: ಬಿಜೆಪಿ ನಾಯಕನೊಬ್ಬ ತನ್ನ ಕಾರಿನಲ್ಲಿ ಮಹಿಳಾ ಸ್ನೇಹಿತೆಯೊಂದಿಗೆ ರೆಡ್ಹ್ಯಾಂಡ್ಆಗಿ ಸಿಕ್ಕಿಬಿದ್ದಿದ್ದು, ನಡುರಸ್ತೆಯಲ್ಲೇ ಆತನನ್ನು ಪತ್ನಿ ಚಪ್ಪಲಿಯಿಂದ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬುಂದೇಲ್ಖಂಡ್ ಪ್ರದೇಶದ ಬಿಜೆಪಿ ನಾಯಕ ಮತ್ತು ಕಾರ್ಯದರ್ಶಿ ಮೋಹಿತ್ ಸೋಂಕರ್ ತನ್ನ ಸ್ನೇಹಿತೆಯೊಂದಿಗೆ ಕಾರಿನಲ್ಲಿ ರೆಡ್ಹ್ಯಾಂಡ್ಆಗಿ ಮೋಹಿತ್ ಸಿಕ್ಕಿಬಿದ್ದಾರೆ. ಇದರಿಂದ ಆಕ್ರೋಶಗೊಂಡ ಪತ್ನಿ, ಅತ್ತೆ-ಮಾವಂದಿರು ಸೇರಿ ಮೋಹಿತ್ಗೆ ಚಪ್ಪಲಿಯಿಂದ ಮನಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲದೇ, ಮೋಹಿತ್ ಸ್ನೇಹಿತೆಗೂ ಥಳಿಸಲಾಗಿದೆ. ಇದರ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಜೂಹಿ ಪೊಲೀಸ್ ಠಾಣೆಯ ಪೊಲೀಸ್ ತಂಡವು ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಸಮಾಧಾನಗೊಳಿಸಿದೆ.
ಈ ಬಗ್ಗೆ ಬಿಜೆಪಿ ನಾಯಕನ ಪತ್ನಿ ಮೋನಿ ಸೋಂಕರ್ ಮತ್ತು ಸಿಕ್ಕಿಬಿದ್ದ ಮಹಿಳೆಯ ಪತಿ ಜೂಹಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪ್ರಕರಣ ಸಂಬಂಧ ದೂರು ದಾಖಲಾಗಿದೆ.