ಸಿಪಿಐಎಂ ಕಾರ್ಯಕರ್ತ ಶಾಜಹಾನ್ ಕೊಲೆ ಪ್ರಕರಣ; ಬಂಧಿತರಲ್ಲಿ ಓರ್ವ ಆರೆಸ್ಸೆಸ್ ಮುಖ್ಯ ಶಿಕ್ಷಕ್ 

ಆವಾಸ್ ಮತ್ತು ಸಿದ್ಧಾರ್ಥನ್ ಕೊಲೆಗೆ ಸಂಚು ಮತ್ತು ಆಯುಧ ಪೂರೈಕೆ ಆರೋಪದಡಿ ಬಂಧಿಸಲಾಗಿದ್ದು, ಜಿನೇಶ್ ಮತ್ತು ಬಿಜುವನ್ನು ಆರೋಪಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ.

News Desk
1 Min Read
File photo of the deceased CPM leader Shahjahan (Photo: Twitter/ @cpimspeak)

ಪಾಲಕ್ಕಾಡ್: ಇತ್ತೀಚೆಗೆ ಹತ್ಯೆಯಾದ ಶಾಜಹಾನ್ ಕೊಲೆ ಪ್ರಕರಣಕ್ಕೆ  ಸಂಬಂಧಿಸಿ ಪೊಲೀಸರು ನಿನ್ನೆ ಮತ್ತೆ ನಾಲ್ವರನ್ನು ಬಂಧಿಸಿದ್ದು, ಬಂಧಿತರ ಪೈಕಿ ಓರ್ವ ಆರೆಸ್ಸೆಸ್ ಮುಖ್ಯ ಶಿಕ್ಷಕ್ ಎಂದು ಪೊಲೀಸರು ತಿಳಿಸಿದ್ದಾರೆ.

ಆವಾಸ್, ಸಿದ್ಧಾರ್ಥನ್, ಜಿನೇಶ್ ಮತ್ತು ಬಿಜು ಎಂಬವರನ್ನು ನಿನ್ನೆ ಪೊಲೀಸರು ಬಂಧಿಸಿದ್ದು, ಈ ಪೈಕಿ ಆವಾಸ್ ಆರೆಸ್ಸೆಸ್‌ನ ಮುಖ್ಯ ಶಿಕ್ಷಕ್ ಎಂದು ಪೊಲೀಸರು ತಿಳಿಸಿದ್ದಾರೆ.

ಆವಾಸ್ ಮತ್ತು ಸಿದ್ಧಾರ್ಥನ್ ಕೊಲೆಗೆ ಸಂಚು ಮತ್ತು ಆಯುಧ ಪೂರೈಕೆ ಆರೋಪದಡಿ ಬಂಧಿಸಲಾಗಿದ್ದು, ಜಿನೇಶ್ ಮತ್ತು ಬಿಜುವನ್ನು ಆರೋಪಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ.

ಪ್ರಕರಣ ಸಂಬಂಧ ಈವರೆಗೆ  12 ಮಂದಿಯನ್ನು ಬಂಧಿಸಲಾಗಿದೆ. ನಿನ್ನೆ ಬಂಧಿಸಿದ ಆರೋಪಿಗಳಿಂದ ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ಮಹತ್ವದ ದಾಖಲೆಗಳು ದೊರೆತಿದೆ ಎಂದು ಪೊಲೀಸರು ಹೇಳಿದ್ದಾರೆ.

- Advertisement -

- Advertisement -
TAGGED:
Share this Article
Leave a comment
adbanner