ಉಡುಪಿ, ಆ 17: ಬ್ರಹ್ಮಗಿರಿ ಸರ್ಕಲ್ ಹಿಂದೂ ರಾಷ್ಟ್ರ ಬ್ಯಾನರ್ ವಿಚಾರಕ್ಕೆ ಸಂಬಂಧಿಸಿದಂತೆ, ಉಡುಪಿ ಜಿಲ್ಲಾ ಎಸ್ ಡಿ ಪಿ ಐ ಸುದ್ದಿಗೋಷ್ಠಿ ನಡೆಸಿದೆ. ವಿವಾದ, ಸಮಸ್ಯೆ, ದ್ವೇಷ ಇಲ್ಲದ ರಾಜ್ಯವಾಗಿತ್ತು. ಆದರೆ, ದುರದೃಷ್ಟವಶಾತ್ ಯುಪಿ, ಎಂಪಿ, ರಾಜಸ್ತಾನದ ರೀತಿಯ ಘಟನೆಗಳು ಇಲ್ಲಿ ಆರಂಭವಾಗಿದೆ ಎಂದು ಎಸ್ ಡಿ ಪಿಐ ಉಪಾಧ್ಯಕ್ಷ ಶಾಹಿದ್ ಅಲಿ ಹೇಳಿದ್ದಾರೆ.
ಕರ್ನಾಟಕದಲ್ಲೂ ಉತ್ತರ ಭಾರತ ಮಾದರಿಯ ಘಟನೆ ಆರಂಭವಾಗಿದೆ. ಬುಲ್ಡೋಜರ್, ಹಿಜಾಬ್ ದ್ವೇಷ ಸೃಷ್ಟಿ ಉಡುಪಿಯಲ್ಲೇ ಆರಂಭವಾಯ್ತು. ಬ್ರಹ್ಮಗಿರಿಯಲ್ಲಿ ಜೈ ಹಿಂದೂ ರಾಷ್ಟ್ರದ ಬ್ಯಾನರ್ ಹಾಕಿದ್ದಾರೆ.ಜನಪ್ರತಿನಿಧಿಗಳು ಸಂವಿಧಾನದಂತೆ ನಡೆಯುತ್ತೇವೆ ಹೇಳುತ್ತಾರೆ.
ಹಿಂದೂ ರಾಷ್ಟ್ರದ ಆರ್ ಎಸ್ ಎಸ್ ಪರಿಕಲ್ಪನೆಯಾಗಿದೆ. ಹಿಂದೂ ಮತ ಪಡೆಯಲು, ಬೇರೆಯವರಿಂದ ಬೇರ್ಪಡಿಸಲು ಈ ಷಡ್ಯಂತ್ರವಾಗಿದೆ.ಹಿಂದೂ ರಾಷ್ಟ್ರ ಕೇವಲ ಹಿಂದೂ ಮತ ಪಡೆಯುವ ಪರಿಕಲ್ಪನೆಯಾಗಿದೆ. ಎಂಟು ವರ್ಷದಿಂದ ಈ ಸರ್ಕಾರದ ಆಡಳಿತವನ್ನು ಹಿಂದೂಗಳು ನೋಡಿದ್ದಾರೆ.
ಉದ್ಯೋಗ ಇಲ್ಲದೆ ಹಿಂದೂ ಯುವಕರು ಅತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಶಾಂತಿಭಂಗ ಮಾಡುವ, ಜನರನ್ನು ಉದ್ರೇಕಿಸಲು ಜನರ ಮತ ಗಳಿಸಲು ಈ ಷಡ್ಯಂತ್ರವಾಗಿದೆ.
- Advertisement -
ಮುಸಲ್ಮಾನರು ತಲೆ ಕೆಡಿಸಿಕೊಳ್ಳಬೇಡಿ, ಪೊಲೀಸ್ ಇಲಾಖೆ ಮೇಲೆ ವಿಶ್ವಾಸವಿದೆ. ವಿವಾದಿತ ಬ್ಯಾನರ್ ತೆರವು ಮಾಡಿ. ಪೊಲೀಸರು ಜನರ ಭರವಸೆ ಹುಸಿ ಮಾಡಬೇಡಿ. ಉಡುಪಿಯ ಉಸಿರುಗಟ್ಟುವ ವಾತಾವರಣ ತಿಳಿಗೊಳಿಸಿ ಎಂದರು.ಕೆಲವೇ ದಿನಗಳಲ್ಲಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡ್ತೇವೆ ಎಂದರು. ಹಿಂದೂ ರಾಷ್ಟ್ರ ಎಂದು ಹಾಕಿರುವ ಬ್ಯಾನರ್ ತೆರವಿಗೆ ಎಸ್ ಡಿಪಿಐ ಒತ್ತಾಯ ಮಾಡಿದೆ.