ಮೈಕ್ ನಲ್ಲಿ ಆಝಾನ್ ಕೂಗೋದು ನಿಲ್ಲಿಸಿದರೆ , ಗಣೇಶೋತ್ಸವದ ಡಿ.ಜೆ ನಿಲ್ಲಿಸುತ್ತೇವೆ: ಮುತಾಲಿಕ್

News Desk
1 Min Read

ಧಾರವಾಡ: ಮೈಕ್ ನಲ್ಲಿ 5 ಬಾರಿ ಆಝಾನ್ ಕೂಗೋದನ್ನು ನಿಲ್ಲಿಸಿದರೆ , ನಾನೇ ಡಿಜೆಯನ್ನು ನಿಲ್ಲಿಸುತ್ತೇನೆ, ಒಂದೇ ಒಂದು ಡಿಜೆ ಹೊರಗೆ ಬಾರದಂತೆ ನಾನೇ ನೋಡಿಕೊಳ್ಳುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಪ್ರಾರ್ಥನಾ ಮಂದಿರಗಳ ಮೇಲೆ ಹಾಕಿರುವ ಮೈಕ್ ವಿಚಾರವಾಗಿ ಧಾರವಾಡ ಎಸ್‌ಪಿ ಕಚೇರಿ ಎದುರು ಶ್ರೀರಾಮ ಸೇನೆ ಕಾರ್ಯಕರ್ತರು ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದ ಮುತಾಲಿಕ್, ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಸುಪ್ರೀಂ ಕೋರ್ಟ್ 15 ವರ್ಷದ ಹಿಂದೆಯೇ ಆದೇಶ ನೀಡಿದೆ. ಇಲ್ಲಿಯವರೆಗೆ ರಾಜ್ಯ ಸರ್ಕಾರ ಆದೇಶ ಜಾರಿ ಮಾಡಿಲ್ಲ ಎಂದರು.

ಶಬ್ದದ ಪರಿಣಾಮದಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಪ್ರಾರ್ಥನಾ ಮಂದಿರಗಳು ಯಾವುದೇ ಧರ್ಮಕ್ಕೆ ಸೇರಿರಲಿ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಆದರೆ ಸರ್ಕಾರ ನಾಟಕವಾಡುತ್ತಿದೆ. ಇದಕ್ಕಾಗಿಯೇ ನಾವು ನಿರಂತರವಾಗಿ ಹೋರಾಡುತ್ತಿದ್ದೇವೆ. ಸರ್ಕಾರದ ಕಾನೂನು ಜಾರಿ ಮಾಡದಿದ್ದರೆ, ಅವರಿಗೆ ಕುಮ್ಮಕ್ಕು ಕೊಟ್ಟಂತಾಗುತ್ತದೆ ಎಂದರು.

- Advertisement -
TAGGED:
Share this Article
Leave a comment
adbanner